ಕೈಕಂಬ: ಕಳೆದ ಹಲವಾರು ದಿನಗಳಿಂದ ನಿರಂತರವಾಗಿ ವಿದ್ಯುತ್ ಕಡಿತವಾಗುತ್ತಿರುವುದರಿಂದ ಬೇಸತ್ತ ಕೈಕಂಬ ಹಾಗೂ ಸುತ್ತಲಿನ ಗ್ರಾಮಸ್ಥರು ಬಿಜೆಪಿ ಮುಖಂಡ ಮಾಜಿ ತಾ.ಪಂ ಸದಸ್ಯ ದೋಗುಪೂಜಾರಿ ನೇತೃತ್ವದಲ್ಲಿ ಈ ಅವ್ಯವಸ್ಥೆ ಸರಿಪಡಿಸುವಂತೆ ವಿದ್ಯುತ್ ಇಲಾಖೆಯ ವ್ಯವಸ್ಥಾಪಕ ನಿರ್ದೇಶಕರಿಗೆ ಕೈಕಂಬ ಮೆಸ್ಕಾಂ ಶಾಖಾಧಿಕಾರಿ ಜಗದೀಶ್ ಮೂರ್ತಿ  ಮುಖಾಂತರ ಭಾನುವಾರ ಮನವಿ ಸಲ್ಲಿಸಲಾಯಿತು.
18 bajpe 2

18 vp kaikamba mescom prathibatane 1
ಮೂರು ದಿನಗಳಲ್ಲಿ ಅವ್ಯವಸ್ಥೆ
ಸರಿಪಡಿಸದಿದ್ದರೆ ಪ್ರತಿಭಟನೆಯ ಎಚ್ಚರಿಕೆ:
ಈ ವೇಳೆ ಮಾತಾಡಿದ ದೋಗು ಪೂಜಾರಿ ಅವರು ಕಳೆದ ಹಲವಾರು ದಿನಗಳಿಂದ ನಿರಂತರವಾಗಿ ವಿದ್ಯುತ್ ಕಡಿತ ಮಾಡಲಾಗುತ್ತಿದೆ. ಇದರಿಂದಾಗಿ ಕೃಷಿ ಚಟುವಟಿಕೆ ಹಾಗೂ ಇನ್ನಿತರ ಕೆಲಸ ಕರ್ಯಗಳು ಸ್ಥಗಿತಗೊಂಡಿದೆ. ಹಗಲಿನಲ್ಲಿ ವಿದ್ಯುತ್ ಕಡಿತ ಮಾಡುವುದರಿಂದ ನೀರು ಸರಬರಾಜಿನಲ್ಲಿ ವ್ಯತ್ಯಯ ಕಂಡುಬಂದು ಕೃಷಿ ಹಾಗೂ ಕುಡಿಯುವ ನೀರಿಗಾಗಿ ಗ್ರಾಮಸ್ಥರು ಪರದಾಡುವಂತಾಗಿದೆ. ಅಲ್ಲದೆ ಮಕ್ಕಳಿಗೆ ವಿದ್ಯಾಭ್ಯಾಸ ನಡೆಸಲು ತೊಂದರೆಯಾಗುತ್ತಿದೆ. ಈ ಅವ್ಯವಸ್ಥೆಯನ್ನು ಮೂರು ದಿನಗಳಲ್ಲಿ ಸರಿಪಡಿಸಬೇಕು. ಇಲ್ಲದಿದ್ದರೆ ಗ್ರಾಮಸ್ಥರೆಲ್ಲಾ ಕೂಡಿಕೊಂಡು ಮೆಸ್ಕಾಂ ಕಚೇರಿಗೆ ಮುತ್ತಿಗೆ ಹಾಗು ಉಗ್ರ ರೀತಿಯಲ್ಲಿ ಪ್ರತಿಭಟನೆ ನಡೆಸಬೇಕಾಗುತ್ತದೆ. ಇದರಿಂದ ಮುಂದೆ ಏನಾದರೂ ಸಂಭವಿಸದರೆ ನಮ್ಮನ್ನು ದೂರಬೇಡಿ ಎಂದು ಇಲಾಖೆಗೆ ಖಡಕ್ ಎಚ್ಚರಿಕೆ ನೀಡಿದರು.
ಈ ಮನವಿಯನ್ನು ಸ್ವೀಕರಿಸಿದ ಕೈಕಂಬ ಮೆಸ್ಕಾಂನ ಶಾಖಾಧಿಕಾರಿ ಜಗದೀಶ್ ಮೂರ್ತಿ , ಈ ಸಮಸ್ಯೆಯ ಬಗ್ಗೆ ನಮಗೆ ಅರಿವಿದೆ. ವಿದ್ಯುತ್ ಸಮಸ್ಯೆಯ ಬಗ್ಗೆ ಮೇಲಧಿಕರಿಗಳಿಗೆ ನಿವು ಸಲ್ಲಿಸಿದ ಮನವಿಯನ್ನು ತಲುಪಿಸಿ, ವಿದ್ಯುತ್ ಸಮಸ್ಯೆ ನೀಗಿಸುವಂತೆ ಅವರಲ್ಲಿ ಚರ್ಚೆ  ನಡೆಸುತ್ತೇನೆ ಎಂದು ಭರವಸೆ ನೀಡಿದರು.
ಮಳಲಿ, ಕಾಜಿಲ, ಕೈಕಂಬ ಹಾಗೂ ಗುರುಪುರದ ಹಲವಾರು ಮಂದಿ ವಿದ್ಯುತ್ ಗ್ರಾಹಕರು ಹಾಜರಿದ್ದರು. ಗ್ರಾ.ಪಂ. ಸದಸ್ಯರಾದ ನೋಣಯ್ಯ ಕೋಟ್ಯಾನ್, ಮಾಧವ ಕಾಜಿಲ, ಹಿಂದೂ ಮುಖಂಡ ಭುಜಂಗ ಕುಲಾಲ್ ಇನ್ನಿತರರು ಉಪಸ್ಥಿತರಿದ್ದರು.
ಸ್ಥಳೀಯರ ವಿದ್ಯುತ್ ಗಂಜಿಮಠ ಕಂಪೆನಿಗೆ?
ಗ್ರಾಹಕರಿಗೆ ಒದಗಿಸಬೇಕಾಗಿದ್ದ ವಿದ್ಯುತನ್ನು ಗಂಜಿಮಠದ ಬೃಹತ್ ಕಂಪೆನಿಗಳಿಗೆ ಸರಬರಾಜು ಮಾಡಲಾಗುತ್ತಿದೆ ಎಂಬ ಆರೋಪ ಸ್ಥಳೀಯರಿಂದ ವ್ಯಕ್ತವಾಗಿದೆ. ಅಲ್ಲದೆ ಈ ಬಗ್ಗೆ ಮನವಿಯಲ್ಲೂ ಉಲ್ಲೇಖಿಸಲಾಗಿದೆ. ಕಂಪೆನಿಗಳಿಗೆ ಸರಕಾರ 24 ಗಂಟೆಯೂ ವಿದ್ಯುತ್ ಪೂರೈಕೆ ಮಾಡುವುದರಿಂದ ಗ್ರಾಹಕರಿಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಮಾಡಿಕೊಂಡು ಸರಿದೂಗಿಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.

By suddi9

Leave a Reply

Your email address will not be published. Required fields are marked *