ಕೈಕಂಬ: ಮಂಗಳಜ್ಯೋತಿ ಸಮಗ್ರ ಶಾಲೆ ಚೈಲ್ಡ್‍ಫಂಡ್ ಇಂಟರ್‍ನ್ಯಾಷನಲ್, ಯು.ಎಸ್.ಎ. ಇದರ ಆಶ್ರಯದಲ್ಲಿ ಪೂಜ್ಯ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಕೃಪಾಶೀರ್ವಾದಗಳೊಂದಿಗೆ ಸೈಕಲ್ ಮತ್ತು ವಿದ್ಯಾರ್ಥಿವೇತನ ವಿತರಣಾ ಸಮಾರಂಭವು ಅ.20 ಮಂಗಳವಾರ ಪೂರ್ವಾಹ್ನ 10.30ಕ್ಕೆ ಪಾರ್ವತಿ ಬಾಬು ಶೆಟ್ಟಿ ಸಭಾಂಗಣ, ಮಂಗಳಜ್ಯೋತಿ ವಾಮಂಜೂರುನಲ್ಲಿ ನಡೆಯಲಿದೆ. ಉದ್ಘಾಟನೆಯನ್ನು ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕ ಮೊಯ್ದಿನ್‍ಬಾವ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಮಂಗಳ ಜ್ಯೋತಿ ಸಮಗ್ರ ಶಾಲೆ, ಚೈಲ್ಡ್‍ಫಂಡ್ ಇಂಟರ್‍ನ್ಯಾಷನಲ್‍ನ ಮುಖ್ಯ ಕಾರ್ಯದರ್ಶಿ ಎ.ರಾಜೇಂದ್ರ ಶೆಟ್ಟಿ ವಹಿಸಿಲಿದ್ದಾರೆ. ಸೈಕಲ್ ವಿತರಣೆಯನ್ನು ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಜೆಸಿಂತ ವಿಜಯ ಅಲ್ಫ್ರೆಡ ವಿತರಿಸಲಿದ್ದಾರೆ. ವಿದ್ಯಾರ್ಥಿವೇತನವನ್ನು ಮಂಗಳೂರು ಪದವು ವಾರ್ಡ್‍ನ ಕಾರ್ಪೋರೇಟರ್ ಭಾಸ್ಕರ್ ಕೆ. ವಿತರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಂಗಳೂರು ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಎಮ್.ಪಿ.ಜ್ಞಾನೇಶ್, ಎಸ್.ಡಿ.ಎಂ.ಮಂಗಳಜ್ಯೋತಿ ಸಮಗ್ರ ಶಾಲೆ ಆಡಳಿತಾಧಿಕಾರಿ ಗಣೇಶ್ ಭಟ್ ವಿ. ಉಪಸ್ಥಿತರಿರುವರು.

By suddi9

Leave a Reply

Your email address will not be published. Required fields are marked *