ಕೈಕಂಬ: ನಾವು ಸೋತ್ರೂ ಪರವಾಗಿಲ್ಲ, ಕಾಂಗ್ರೆಸ್ನವರು ಜೈಲಿಗೆ ಹೋಗ್ಬೇಕು ಎಂದು ಬಿಜೆಪಿ ಮುಖಂಡ ಸುಬ್ರಹ್ಮಣ್ಯನ್ ಸ್ವಾಮಿ ತೀರ್ಮಾನಿಸಿದ್ದಾರೆ. ಆದರೆ ಅವರ ಕನಸು ಎಂದಿಗೂ ಕೈಗೂಡುವುದಿಲ್ಲ ಎಂದು ಮಾಜಿ ಕೇಂದ್ರ ಸಚಿವ ಆಸ್ಕರ್ ಫೆರ್ನಾಂಡೀಸ್ ನುಡಿದರು.
ಸುಬ್ರಹ್ಮಣ್ಯನ್ ಸ್ವಾಮಿ ಅವರು ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿದ್ದಾರೆಂದು ಆರೋಪಿಸಿ, ಅದನ್ನು ಖಂಡಿಸಿ ಗುರುಪುರ ಕೈಕಂಬದಲ್ಲಿ ಮಂಗಳವಾರ ಸಂಜೆ ಕಾಂಗ್ರೆಸ್ ವತಿಯಿಂದ ನಡೆದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು.01

01

ಸುಬ್ರಹ್ಮಣ್ಯನ್ ಸ್ವಾಮಿ ವಿರುದ್ಧ ಹರಿಹಾಯ್ದ ಆಸ್ಕರ್, ಸುಬ್ರಹ್ಮಣ್ಯನ್ ಸ್ವಾಮಿ ಅವರು ತಾನೇ ವಾದ ಮಂಡಿಸಿ, ಚರ್ಚೆ ನಡೆಸಿ ತೀರ್ಮಾನ ಬರೆಯುವುದು ಬಳಿಕ ಜೈಲಿಗೆ ಹಾಕುವುದು ಕೂಡಾ ನಾನೇ ಎಂದು ಹೇಳಿದ್ದಾರೆ. ಆದರೆ ಅದೇ ಸಂದರ್ಭದಲ್ಲಿ ಸೋನಿಯಾ ಗಾಂಧಿ ತಾನು ಇಂದಿರಾ ಗಾಂಧಿಯವರ ಸೊಸೆ ಎಂದು ಹೇಳಿದ್ದಾರೆ. ಯಾಕೆಂದರೆ 1987ರಲ್ಲಿ ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷ ಸೋತು ಜನಸಂಘ ಅಧಿಕಾರಕ್ಕೆ ಬಂದಾಗ ಕಾಂಗ್ರೆಸ್ ಸೋತ್ರೂ ಪರವಾಗಿಲ್ಲ, ಅವರು ಜೈಲಿಗೆ ಹೋಗ್ಬೇಕು ಎಂದು ಜನಸಂಘದವರು ಇಂದಿರಾಗಾಂಧಿಯವರನ್ನೂ ಜೈಲಿಗೆ ಕಳಿಸಲು ತೀರ್ಮಾನಿಸಿದರು. ಆಗ ಜನತೆ ಇಂದಿರಾ ಗಾಂಧಿ ಜೈಲಿಗೆ ಹೋದ್ರೇ ನಾವೂ ಕೂಡಾ ಜೈಲಿಗೆ ಹೋಗುತ್ತೇವೆ ಎಂದು ತಿಳಿಸಿ ಲಕ್ಷಾಂತರ ಮಂದಿ ಜೈಲಿಗೆ ಹೋದ್ರು. ಬಳಿಕ ಚಿಕ್ಕಮಗಳೂರಿನಲ್ಲಿ ನಡೆದ ಚುನಾವಣೆಯಲ್ಲಿ ಗೆದ್ದ ಇಂದಿರಾಗಾಂಧಿಯವರು ದೇಶದ ಮತ್ತೊಮ್ಮೆ ಪ್ರಧಾನಿಯಾದರು ಎಂದು ಆಸ್ಕರ್ ನುಡಿದಿದ್ದಾರೆ.

ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಯಾವುದೇ ಭ್ರಷ್ಟಾಚಾರ ನಡೆದಿಲ್ಲ ಎನ್ನುವುದಕ್ಕೆ ಸರಿಯಾದ ದಾಖಲೆ ಇದೆ. ಈ ದಾಖಲೆಯನ್ನು ಯಾರೂ ಕೂಡಾ ಪರಿಶೀಲನೆ ನಡೆಸಬಹುದು. ಈ ಪ್ರಕರಣವನ್ನು ಮುಂದಿಟ್ಟುಕೊಂಡು ಗಾಂಧಿಕುಟುಂಬದ ಮೇಲೆ ಪಿತೂರಿ ನಡೆದಿದೆ ಎಂದು ಆಸ್ಕರ್ ಆಪಾದಿಸಿದರು.
ಈ ಮುಂಚೆ ಮಾತಾಡಿದ ಶಾಸಕ ಮೊಯ್ದೀನ್ ಬಾವಾ ಸುಬ್ರಹ್ಮಣ್ಯನ್ ಸ್ವಾಮಿ ಒಬ್ಬ ಬೊಂಬಟ್ ವ್ಯಕ್ತಿ. ಈ ವ್ಯಕ್ತಿಯನ್ನು ಕರೆತಂದು ಬಿಜೆಪಿ ಕಾಂಗ್ರೆಸ್ ಮುಖಂಡರ ಮೇಲೆ ಸುಳ್ಳು ಕೇಸ್ ಜಡಿಯುತ್ತಿದ್ದಾರೆ. ಆದರೆ ಅವರ ಆಸೆ ಕೈಗೂಡುವುದಿಲ್ಲ ಎಂದು ಹೇಳಿದರು.

ಕಾಂಗ್ರೆಸ್ ಮುಖಂಡ ಗಫೂರ್,ಗುರುಪುರ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಪಥ್ವಿರಾಜ್ , ಗಂಜಿಮಠ ಗ್ರಾ. ಪಂ ಅಧ್ಯಕ್ಷೆ ಮಾಲತಿ , ಉಪಧ್ಯಾಕ್ಷ ಝಾಕೀರ್,  ಮಾಜಿ ಜಿಲ್ಲಾ ಪಂ ಸದಸ್ಯ ಕೃಷ್ಣ ಅಮೀನ್, ಅಜೀದ್ ಬಾಷಾ, ಗಣೇಶ್ ಪೂಜಾರಿ, ಕೆ.ಭಾಸ್ಕರ್, ರುಕೀಯ, ಯು.ಪಿ.ಇಬ್ರಾಹಿಂ ಜಿಲ್ಲಾ ಪಂಚಾಯತ್ ಸದಸ್ಯ ಮೆಲ್ವಿನ್, ಅಲ್ಪಸಂಖ್ಯಾತರ ಆಧ್ಯಕ್ಷ  ಇಸ್ಮಾಯಿಲ್, ಸದಸ್ಯರಾದ  ಎಸ್.ಎಮ್.ಸಮೀರ್ ಮಾಮ್ತಜ್, ಅಕ್ಬರ್ ಬಾಷಾ, ರವೀಶ್, ಸುನೀಲ್, ಮುಜಾಕ್, ಬಂಗ್ಲಗುಡ್ಡೆ ಅಯ್ಯುಬ್, ಭಾಸ್ಕರ ಪೂಜಾರಿ, ಉದಯ ಭಟ್ಟ ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *