ಕೈಕಂಬ:ಪೊಂಪೈ ಮಾತೆ ದೇವಾಲಯ ಗುರುಪುರ ಕೈಕಂಬ ಕ್ರಿಸ್ಮಸ್ ಸೌಹಾರ್ದಕೂಟವನ್ನು ಕೈಕಂಬ ಪೇಟೆಯಲ್ಲಿ ಡಿ.23ರಂದು ಬುಧವಾರ ಹಮ್ಮಿಕೊಳ್ಳಲಾಗಿತ್ತು. ಪ್ರಾರ್ಥನೆಯೊಂದಿಗೆ ಕಾರ್ಯಕಮ್ರಕ್ಕೆ ಚಾಲನೆ ನೀಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪೊಂಪೈ ಮಾತೆ ದೇವಾಲಯ ಗುರುಪುರ ಕೈಕಂಬದ ಧರ್ಮಗುರು ವಂ.ಫಾ.ಪಾವ್ಲ್ ಪಿಂಟೊರವರು ವಹಿಸಿಕೊಂಡಿದ್ದರು. ಮುಖ್ಯ ಅತಿಥಿಗಳಾಗಿ ಕೊಂಕಣಿ ಸಾಹಿತ್ಯ ಅಕಾಡೆಮಿ ಕರ್ನಾಟಕ ಸರ್ಕಾರ ಇದರ ಅಧ್ಯಕ್ಷರು ರೋಯ್ ಕ್ಯಾಸ್ಟೆಲಿನೊ, ಪೊಂಪೈ ಕಾಲೇಜು ಐಕಳ ಇದರ ಅಸೋಸಿಯೇಟ್ ಪ್ರೊಫೆಸರ್ ಆಫ್ ಕಾಮರ್ಸ್ ಕೆ.ಜಗದೀಶ ಹೊಳ್ಳ, ಸಯ್ಯದ್ ಮದನಿ ವಿದ್ಯಾಸಂಸ್ಥೆ ಹಳೆಕೋಟೆ ಉಳ್ಳಾಲ ಇದರ ಮುಖ್ಯೋಪಾಧ್ಯಾಯರು ಕೆ.ಎಂ.ಕೆ. ಮಂಜನಾಡಿಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

DSC_0763

DSC_0701

DSC_0729

DSC_0730

DSC_0732

DSC_0736

DSC_0744

DSC_0746

DSC_0751

DSC_0759

 

DSC_0769

DSC_0776

DSC_0787

DSC_0790

DSC_0791

DSC_0795

DSC_0800

DSC_0810

DSC_0819

DSC_0831

DSC_0836


DSC_0877

DSC_0891

DSC_0847
ಕ್ರಿಸ್ಮಸ್ ಸೌಹಾರ್ಧ ಕೂಟದಲ್ಲಿ ಕ್ರಿಸ್ಮಸ್ ಟ್ರಿಯನ್ನು ಬಣ್ಣ ಬಣ್ಣದ ವಿದ್ಯುದ್ವೀಪಗಳನ್ನು ಬೆಳಗಿಸುದರ ಮೂಲಕ ಅತಿಥಿ ಗಣ್ಯರು ಉಧ್ಘಾಟಿಸಿದರು. ಕ್ರಿಸ್ಮಸ್ ಕೇಕನ್ನು ಕತ್ತರಿಸಿ ಸಂತೋಷವನ್ನು ಪರಸ್ಪರ ಹಂಚಿಕೊಂಡರು.ಅತಿಥಿಗಣ್ಯರು ತಮ್ಮ ಭಾಷಣದಲ್ಲಿ ಧರ್ಮಗಳು ವಿಭಿನ್ನವಾದರೂ ಧರ್ಮಗಳ ಸಾರ ಒಂದೇ, ಪರಸ್ಪರ ಪ್ರೀತಿ, ಶಾಂತಿ,ಸಹಬಾಳ್ವೆಯ ಸಂದೇಶವನ್ನು ವೀಡುತ್ತಿದೆ. ಹಾಗೂ ಸರ್ವರೂ ಪರಸ್ಪರ ಪ್ರೀತಿಯಿಂದ, ಒಗ್ಗಟ್ಟಿನಿಂದ ಬಾಳುವ ಸಂದೇಶವನ್ನು ನೀಡಿದರು. ಪೊಂಪೈ ಮಾತೆ ದೇವಾಲಯ ಗುರುಪುರ ಕೈಕಂಬ ಸಂಘ ಸಂಸ್ಥೆಗಳು ಹಾಗೂ ವಾರ್ಡ್‍ನ ಸದಸ್ಯರು ವಿಭಿನ್ನ ಸಾಂಸ್ಕ್ರತಿಕ ಕಾರ್ಯಕ್ರಮಗಳ ಮೂಲಕ ಕ್ರಿಸ್ಮಸ್ ಸಂದೇಶವನ್ನು ನೀಡಿದರು. ಕ್ರಿಸ್ಮಸ್ ತಾತನ ಆಗಮನ ಸರ್ವರಿಗೂ ಸಂತಸವನ್ನು ತಂದಿತು. ಸರ್ವರೂ ಪ್ರೀತಿಯಿಂದ ಬಾಳಲು ಕರೆ ನೀಡಿ ಕ್ರೀಸ್ಮಸ್ ಹಾಗೂ ಹೊಸವರುಷದ ಶುಭಾಶಯಗಳನ್ನು ಕೋರಿದರು. ಪೊಂಪೈ ಮಾತೆ ದೇವಾಲಯ ಪಾಲನಾ ಸಮಿತಿಯ ಉಪಾಧ್ಯಕ್ಷರು ಜೋನ್ಸನ್ ಲೋಬೋ ಸರ್ವರನ್ನು ಸ್ವಾಗತಿಸಿದರು. ಸಾಮಾಜಿಕ ಹಾಗೂ ಸಾಂಸ್ಕ್ರತಿಕ ಸಮಿತಿಯ ಸಂವಾಲಕರು ಅನಿತಾ ಫೆರ್ನಾಂಡಿಸ್ ಸರ್ವರನ್ನೂ ವಂದಿಸಿದರು. ಸಂತೋಷ್ ಮೊರಾಸ್ ಹಾಗೂ ಕುಮಾರಿ ಜೆನೆವಿವ್ ಸಿಕ್ವೇರಾರವರು ಕಾರ್ಯಕ್ರಮವನ್ನು ನಿರೂಪಿಸಿದರು.

By suddi9

Leave a Reply

Your email address will not be published. Required fields are marked *