ಪೊಳಲಿ: ಕರಿಯಂಗಳ ಗ್ರಾಮದ ಪೊಳಲಿ ಸಮೀಪದ ಸಾಣೂರುಪದವಿನಲ್ಲಿ ಶ್ರೀ ಧರ್ಮಶಾಸ್ತ ಭಜನಾ ಮಂದಿರದ 8 ನೇ ವರ್ಷದ ಭಜನಾ ಸಂಕೀರ್ತನೆಯು ಫೆ. 19ರಂದು ಶುಕ್ರವಾರ ಸೂಯೋದಯದಿಂದ ಮರುದಿನ ಫೆ.20ರಂದು ಶನಿವಾರ ಸೂರ್ಯೋದಯದವರೆಗೆ ನಾನಾ ಭಜನಾ ಮಂಡಳಿಗಳಿಂದ ಭಜನಾ ಸಂಕೀರ್ತನೆಯು ನಡೆಯಲಿದೆ. ಫೆ.20ರಂದು ಶನಿವಾರ ಬೆಳಗ್ಗೆ 9 ಗಂಟೆಯಿಂದ ಶನೀಶ್ವರ ಕಥಾವೃತ ಪೂಜೆ ಜರಗಲಿದೆ ಮಧ್ಯಾಹ್ನ 12.30ಕ್ಕೆ ಮಹಾಪೂಜೆ ನಂತರ ಅನ್ನಸಂತರ್ಪಣೆ ನಡೆಯಲಿದೆ. ಫೆ. 21ರಂದು ಭಾನುವಾರ ರಾತ್ರಿ
ಶ್ರೀ ರಕ್ತೇಶ್ವರೀ ದೇವಿಯ ನೇಮೋತ್ಸವ ಹಾಗೂ ಅನ್ನ ಸಂತರ್ಪಣೆ ಜರಗಲಿದೆ.