ಕೈಕಂಬ: ಚುನಾವಣೆಗೆ ಕ್ಷಣಗಣನೆ ಆರಂಭವಾಗಿದ್ದು, ಕೊನೆಯ ಹಂತ ಎಂಬಂತೆ ಸಜಿಪ ಮುನ್ನೂರು ಜಿಲ್ಲಾ ಪಂಚಾಯತ್ ಕ್ಷೇತ್ರದ ಅಭ್ಯರ್ಥಿ ಪದ್ಮನಾಭ ಕೊಟ್ಟಾರಿ ಪರವಾಗಿ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಮನೆಮನೆಗೆ ತೆರಳಿ ಬಿರುಸಿನ ಮತಪ್ರಚಾರ ನಡೆಸಿದ್ದಾರೆ. ಬಡಗಬೆಳ್ಳೂರಿನ ಮನೆಮನೆಗೆ ತೆರಳಿದ ಸಂಸದ ನಳಿನ್ ಕುಮಾರ್ ಕಟೀಲ್ ಬಿಜೆಪಿ ಪಕ್ಷದ ಪದ್ಮನಾಭ ಕೊಟ್ಟಾರಿಯವರಿಗೆ ಮತ ನೀಡುವಂತೆ ಕೇಳಿಕೊಂಡರು.
ಫೆ.20ರಂದು ಮತದಾನ ನಡೆಯಲಿದ್ದು, ಪದ್ಮನಾಭ ಕೊಟ್ಟಾರಿಯವರ ವಿರುದ್ಧ ಕಾಂಗ್ರೆಸ್‍ನಿಂದ ಚಂದ್ರಪ್ರಕಾಶ್ ಶೆಟ್ಟಿ ಸ್ಪರ್ಧಿಸುತ್ತಿದ್ದಾರೆ. ಇಬ್ಬರ ನಡುವೆ ಜಿದ್ದಾಜಿದ್ದಿನ ಪೈಪೋಟಿ ಉಂಟಾಗಿದ್ದು, ಯಾರ ಕೊರಳಿಗೆ ವಿಜಯಮಾಲೆ ಬೀಳಲಿದೆ ಎಂಬ ಕುತೂಹಲ ಉಂಟಾಗಿದೆ. ಜಿ.ಆನಂದ,ಮಹಾಬಲ ಶೆಟ್ಟಿ,ದೇವಪ್ಪ ಪೂಜಾರಿ,ಪ್ರಕಾಶ್, ರಮೇಶ್, ಸಂದೀಪ್, ಕರಿಯಂಗಳ ಕ್ಷೇತ್ರದ ಯಶವಂತ ಪೂಜಾರಿ, ಸಜಿಪ ಮುನ್ನೂರು ಜಿಲ್ಲಾ ಪಂಚಾಯತ್ ಕ್ಷೇತ್ರದ ಅಭ್ಯರ್ಥಿ ಪದ್ಮನಾಭ ಕೊಟ್ಟಾರಿ ಪರವಾಗಿ ಮತಯಾಚನೆ ನಡೆಸಿದರು.

