ಬಂಟ್ವಾಳ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಸೇವಾ ವಿಭಾಗದ ಸೇವಾ ಭಾರತಿಯ ಆಶ್ರಯದಲ್ಲಿ ಮಂಗಳೂರಿನ ಕೆ ಎಂ ಸಿ ಆಸ್ಪತ್ರೆ ಬ್ಲಡ್ ಬ್ಯಾಂಕ್ ಇದರ ಸಹಭಾಗಿತ್ವದಲ್ಲಿ ಮಾ.06 ಭಾನುವಾರ ವಿಟ್ಲದ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೆಳಿಗ್ಗೆ ರಕ್ತದಾನ ಶಿಬಿರವು ನಡೆಯುತ್ತದೆ. ಈ ಕಾರ್ಯಕ್ರಮವನ್ನು ಲಯನ್ಸ್ ಜಿಲ್ಲಾ ಗವರ್ನರ್ ಎಂ ಕವಿತಾ ಶಾಸ್ತ್ರಿ ಉದ್ಘಾಟಿಸುವರು. ವೆಂಕಟೇಶ್ವರ ಅಮೈ, ತುಳಸೀದಾಸ್ ಶೆಣೈ ಮತ್ತು ಕೃಷ್ಣ ಭಟ್ ಮಾದಕಟ್ಟೆ ಉಪಸ್ಥಿತರಿದ್ದು, ಸುರಕ್ಷಾ ಹೆಲ್ತ್ ಸೆಂಟರಿನ ಡಾ| ಗೀತಾಪ್ರಕಾಶ್ ಅಧ್ಯಕ್ಷತೆ ವಹಿಸಲಿದ್ದಾರೆ.