ಬಂಟ್ವಾಳ: ಬ್ರಹ್ಮ ಶ್ರೀ ನಾರಾಯಣ ಗುರುಗಳ ಸಂದೇಶವನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಒಂದೇ ಜಾತಿ, ಮತ, ದೇವರು ಎಂಬ ಸಂದೇಶನ್ನು ಜಗತ್ತಿಗೆ ಮತ್ತೊಮ್ಮೆ ಸಾರುವ ಸಂದರ್ಭ ಎದುರಾಗಿದೆ. ಗುರುಗಳ ಸಂದೇಶದಂತೆ ನಾವು ಶೈಕ್ಷಣಿಕ ಬಲಾಢ್ಯರಾಗಬೇಕು. ಸ್ವಂತಿಕೆಯನ್ನು ಬೆಳೆಸಿಕೊಂಡು ಸಾಮಾಜಿಕ ಅಪಮೌಲ್ಯಗಳಿಂದ, ಚಟಗಳಿಂದ, ಅಂಧಶ್ರದ್ದೆಗಳಿಂದ ದೂರವಾಗಬೇಕು ಎಂದು ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಸಜೀಪಮೂಡ ಇದರ ಅಧ್ಯಕ್ಷ ಕೆ. ಸಂಜೀವ ಪೂಜಾರಿ ಹೇಳಿದರು.
0807bteph5
ಅವರು ಜು. 8ರಂದು ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಸಜೀಪಮೂಡ ಇದರ 17ನೇ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಶಾಲೆಗೆ ಹೋಗುವ ವಿದ್ಯಾರ್ಥಿಗಳಿಗೆ ಉತ್ತಮ ಬೋದನೆಗಳನ್ನು ತುಂಬಿರಿ, ಶ್ರಮ ಸಾಧನೆಗಳ ಮೂಲಕ ಪ್ರಗತಿಯನ್ನು ಸಾ„ಸಿರಿ, ಯಾವುದೇ ಸಮಸ್ಯೆಗಳು ಎದುರಾದಾಗ ಹಿಂಜರಿಕೆ, ತಪ್ಪು ಮಾಡಿದ ಭಾವನೆ ಬೇಡ. ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳಿರಿ ಎಂದು ಸಭಿಕರಿಗೆ ಕರೆ ನೀಡಿದರು.ಸರಕಾರದ ಮಟ್ಟದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ ಆಚರಣೆ ಸಂಬಂಧವಾಗಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರ ಮೂಲಕ ಅನುಷ್ಠಾನಕ್ಕೆ ತರುವಲ್ಲಿ ಸಮುದಾಯದ ನಾಯಕರ ಜೊತೆಗೂಡಿ ಪ್ರಯತ್ನಗಳನ್ನು ಮುಂದುವರಿಸುವುದಾಗಿ ಹೇಳಿದರು.

ಮಹಾಸಭೆಯಲ್ಲಿ ಮುಂದಿನ ಎರಡು ವರ್ಷಗಳ ಅವದಿಗೆ ಕೆ. ಸಂಜೀವ ಪೂಜಾರಿ ಅಧ್ಯಕ್ಷರಾಗಿ ಪುನರಾಯ್ಕೆಯಾದರು. ಉಪಾಧ್ಯಕ್ಷರಾಗಿ ಯಶವಂತ ಪೂಜಾರಿ ದೇರಾಜೆ, ಕಾರ್ಯದರ್ಶಿ ರಾಜೇಶ್ ಕೋಟ್ಯಾನ್ ಶಾಂತಿನಗರ, ಜತೆಕಾರ್ಯದರ್ಶಿ ಸುರೇಶ್ ಪೂಜಾರಿ ನಗ್ರಿ, ಕೋಶಾಧಿಕಾರಿ ಜಯಶಂಕರ್ ಕಾನ್ಸಾಲೆ, ಲೆಕ್ಕಪರಿಶೋಧಕರಾಗಿ ರಮೇಶ ಅನ್ನಪ್ಪಾಡಿ ಆಯ್ಕೆಯಾಗಿದ್ದಾರೆ.
ಭಜನಾ ಅಧ್ಯಕ್ಷರಾಗಿ ಪ್ರವೀಣ್ ಪೂಜಾರಿ ಸುಭಾಶ್‍ನಗರ, ಕಾರ್ಯದರ್ಶಿಯಾಗಿ ರಂಜಿತ್ ಸುಭಾಶ್‍ನಗರ ಆಯ್ಕೆಯಾದರು. ಸಭೆಯಲ್ಲಿ ಮಹಿಳಾ ಸಮಿತಿ ಉಪಾಧ್ಯಕ್ಷೆಯಾಗಿ ಯೋಗಿನಿ ಪೆಲತ್ತಕಟ್ಟೆ ಮತ್ತು ಸದಸ್ಯರು ಉಪಸ್ಥಿತರಿದ್ದರು.
ಗಿರೀಶ್ ಕುಮಾರ್ ಪೆರ್ವ ಸ್ವಾಗತಿಸಿ, ವಂದಿಸಿದರು. ರಮೇಶ್ ಅನ್ನಪ್ಪಾಡಿ ಕಾರ್ಯಕ್ರಮ ನಿರ್ವಹಿಸಿದರು.

0807bಣeಠಿh5

By suddi9

Leave a Reply

Your email address will not be published. Required fields are marked *