ಬಂಟ್ವಾಳ: ಜು. 8: ದಕ್ಷ ಪೋಲೀಸ್ ಅಧಿಕಾರಿಗಳ ಸಾವಿಗೆ ರಾಜ್ಯದ ಪ್ರಭಾವಿ ರಾಜಕಾರಣಿ, ಸಚಿವ ಕೆ.ಜೆ. ಜಾರ್ಜ್ ಕಾರಣರಾಗಿದ್ದು ಮುಖ್ಯಮಂತ್ರಿಗಳು ಸದ್ರಿ ಸಚಿವರ ರಾಜಿನಾಮೆ ಪಡೆದು ಅ„ಕಾರಿಯ ಆತ್ಮಹತ್ಯೆಗೆ ಕಾರಣವನ್ನು ತನಿಖೆ ನಡೆಸಬೇಕು ಎಂದು ಜಿ. ಪಂ. ಸದಸ್ಯ ಎಂ. ತುಂಗಪ್ಪ ಬಂಗೇರ ಬಂಟ್ವಾಳ ತಹಶೀಲ್ದಾರ್ ಮೂಲಕ ಸಲ್ಲಿಸಿದ ಮನವಿಯಲ್ಲಿ ಒತ್ತಾಯಿಸಿದ್ದಾರೆ.
ನಮ್ಮ ಜಿಲ್ಲೆಯಲ್ಲಿ ಹಲವಾರು ವರ್ಷಗಳಿಂದ ಅದರಲ್ಲೂ ದಕ್ಷ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿ ಹೆಸರು ಗಳಿಸಿರುವ ಡಿವೈಎಸ್‍ಪಿ ಎಂ.ಕೆ ಗಣಪತಿ ಬಂಟ್ವಾಳ ತಾಲೂಕಿನಲ್ಲಿ 2006ರಲ್ಲಿ ಸರ್ಕಲ್ ಇನ್ಸ್ ಪೆಕ್ಟರ್ ಆಗಿ ಸೇವೆ ಸಲ್ಲಿಸಿ ಹೆಸರು ಗಳಿಸಿರುತ್ತಾರೆ.
0807bteph11
ಅವರು ಎಲ್ಲಾ ರಾಜಕಾರಣಿಗಳೊಂದಿಗೆ ಗೌರವ ಕೊಟ್ಟು ಕಾನೂನಿಗೆ ಬದ್ಧತೆ ನೀಡಿ ಕರ್ತವ್ಯ ನಿರ್ವಹಿಸುತ್ತಿದ್ದರು. ಅಂತಹ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದರೆ ರಾಜ್ಯದಲ್ಲೇ ದಕ್ಷ ಪ್ರಾಮಾಣಿಕ ಅಧಿಕಾರಿಗಳಿಗೆ ಬೆಲೆ ಇಲ್ಲದಂತೆ ಆಗಿದೆ.
ಚಿಕ್ಕಮಗಳೂರು ಡಿವೈಎಸ್‍ಪಿ ಕಲ್ಲಪ್ಪ, ಮಡಿಕೇರಿ ಡಿವೈಎಸ್‍ಪಿ ಗಣಪತಿ, ಜಿಲ್ಲಾ„ಕಾರಿ ರವಿ ಕುಮಾರ್ ಸಾವಿಗೆ ಸರಕಾರವೇ ಕಾರಣ. ಈ ಹಿಂದೆ ಸೇವೆಗೆ ರಾಜಿನಾಮೆ ನೀಡಿದ ಅನುಪಮಾ ಶೆಣೈ ರಾಜ್ಯದಲ್ಲಿ ಆಡಳಿತದ ವೈಫಲ್ಯಕ್ಕೆ ಬಲಿಯಾಗಿದ್ದಾರೆ. ಹಿರಿಯ ಅಧಿಕಾರಿಗಳು ಮತ್ತು ಸಚಿವರ ದಬ್ಬಾಳಿಕೆಯಿಂದ ಘಟನೆ ನಡೆದಿದೆ ಎಂದು ಆರೋಪಿಸಿದ್ದಾರೆ.

ಇಂತಹ ದಕ್ಷ ಅಧಿಕಾರಿಗಳ ಕೊಲೆ , ಆತ್ಮಹತ್ಯೆ, ಸೇವೆಗೆ ರಾಜಿನಾಮೆ ನೀಡುತ್ತಿರುವುದು ತಮ್ಮ ಸರಕಾರಕ್ಕೆ ಶೋಭೆ ತರುವಂತದ್ದಲ್ಲ. ಆದುದರಿಂದ ಆತ್ಮಹತ್ಯೆ ಮಾಡಿಕೊಂಡ ಎಂ.ಕೆ ಗಣಪತಿಯವರು ಆತ್ಮಹತ್ಯೆ ಮಾಡುವ ಮೊದಲು ಮಾಧ್ಯಮದ ಮೂಲಕ ಹೇಳಿದಂತೆ ಆತ್ಮಹತ್ಯೆ ಮಾಡಲು ಕಾರಣರಾದ ಸಚಿವ ಮತ್ತು ರಾಜ್ಯದ ಇಬ್ಬರು ಉನ್ನತ ಪೊಲೀಸ್ ಅಧಿಕಾರಿಗಳನ್ನು ರಾಜಿನಾಮೆ ಕೊಡಿಸಿ ಎಂದು ಆಗ್ರಹಿಸಿದ್ದಾರೆ.
ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ದಕ್ಷ ಪ್ರಾಮಾಣಿಕ ಅ„ಕಾರಿಗಳಿಗೆ ಯಾವುದೇ ಬೆದರಿಕೆ, ಕಿರುಕುಳ ನೀಡದೇ ರಕ್ಷಣೆಯನ್ನು ಒದಗಿಸಬೇಕು.ರಾಜ್ಯದ ಯಾವುದೇ ಪ್ರಾಮಾಣಿಕ ಅಧಿಕಾರಿಗಳು ಯಾವುದೇ ಬೆದರಿಕೆಗೆ ಜಗ್ಗದೆ ತನ್ನ ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸಬೇಕು.

ಯಾವುದೇ ಕಾರಣಕ್ಕೂ ಆತ್ಮಹತ್ಯೆಯಂತಹ ಹೇಯಕೃತ್ಯವನ್ನು ಮಾಡದೇ ರಾಜ್ಯದಲ್ಲಿ ಪ್ರಾಮಾಣಿಕರಿಗೆ ಬೆಲೆ ಇದೆ ಎಂಬುದನ್ನು ಸಾಬೀತುಪಡಿಸಿಕೊಳ್ಳಲು ಸಹಕರಿಸಬೇಕು.ಆದುದರಿಂದ ಮುಖ್ಯಮಂತ್ರಿಯವರು ಈ ಬಗ್ಗೆ ಗಂಭೀರವಾಗಿ ಪರಿಗಣಿಸಿ ನೊಂದವರ ಕುಟುಂಬಕ್ಕೆ ಸಾಂತ್ವನ ಹೇಳಿ ಈ ತನಿಖೆಯನ್ನು ಸಿಬಿಐಗೆ ಕೊಡಬೇಕಾಗಿ ಕೋರುವುದಾಗಿ ತಿಳಿಸಿದ್ದಾರೆ.
ಬಂಟ್ವಾಳ ಉಪ ತಹಶೀಲ್ದಾರ್ ಪರಮೇಶ್ವರ ನಾಯಕ್ ಮನವಿ ಸ್ವೀಕರಿಸಿದರು. ಮನವಿ ನೀಡುವಾಗ ಪುರಸಭಾ ಮಾಜಿ ಅಧ್ಯಕ್ಷ ದಿನೇಶ್ ಭಂಡಾರಿ, ಮಾರಪ್ಪ ಸುವರ್ಣ ಕೆದಿಲ, ಮಹೇಶ್ ಕೋಡಿಬೆಟ್ಟು ಮನೋಜ್ ಕಲ್ಲಡ್ಕ ಮತ್ತು ಇತರರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *