ಸುದ್ದಿ9 ಕೈಕಂಬ: ಬಂಟ್ವಾಳ ತಾಲೂಕಿನ ಬಡಗಬೆಳ್ಳೂರಿನಲ್ಲಿ ಸರಕಾರದ ಭೂಚೇತನ ಯೋಜನೆಯಡಿಯಲ್ಲಿ ಕೃಷಿಕರಿಗೆ ಕೃಷಿ ವಿಚಾರದ ಬಗ್ಗೆ ಮಾಹಿತಿ ನೀಡುವ ಕಾರ್ಯಕ್ರಮವು ಜೂ.10ರಂದು ಶನಿವಾರ ಬಡಗಬೆಳ್ಳೂರು ಪಂಚಾಯತ್ ವಠಾರದಲ್ಲಿ ನಡೆಯಿತು. ಬಡಗಬೆಳ್ಳೂರು ಪಂಚಾಯತ್ ಮಾಜಿ ಅಧ್ಯಕ್ಷೆ ದೀಪ ಬೆಳಗಿಸಿ ಉದ್ಘಾಟಿಸಿದರು. ಕೃಷಿ ಸಹಾಯಕ ಬಾಬು ಮಾತಾಡಿ, ಭತ್ತದ ಕೃಷಿಯ ಬಗ್ಗೆ ಮಾಹಿತಿ ನೀಡಿದರು. ಕರಾವಳಿ ಪ್ರಮುಖ ಆಹಾರ ಬೆಳೆಯಾಗಿರುವ ಭತ್ತವನ್ನು ಜಿಲ್ಲೆಯಾದ್ಯಂತ ಸುಮಾರು 55 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ. ಸುಗ್ಗಿ, ಎಣಿಲು, ಕೊಳಕೆ ಈ ರೀತಿ ಹಂಗಾಮಿನಲ್ಲಿ ಪಾರಂಪರಾಗತವಾಗಿ ಬೆಳೆಯಾಗುತ್ತಿದ್ದ ಭತ್ತದ ಕೃಷಿ ಇಂದು ಗದ್ದೆಯಲ್ಲು ಹಸಿರಿಲ್ಲದೆ ಒಣಗಿ ಹೋಗುತ್ತಿದೆ. ಭತ್ತದ ಬೆಳೆ ಬೆಳೆದರೂ ಸೂಕ್ತ ಕೂಲಿ ಸಿಗುತ್ತಿಲ್ಲ. ಬತ್ತದ ನಿರ್ವಹಣೆ ಇಲ್ಲದೇ ಇರುವುದರಿಂದ ಇಂದು ಬತ್ತದ ಬೆಳೆ ಬೆಳೆಯುವವರಲ್ಲಿ ಈ ಬೆಳೆ ಬೆಳೆಯುವುದು ಲಾಭದಾಯಕವಲ್ಲ ಎಂಬ ಭಾವನೆ ಬರುತ್ತದೆ. ಅದಕ್ಕಾಗಿ ಈ ಬೆಳೆಯನ್ನು ಲಾಭದಾಯ ಬೆಳೆಯನ್ನಾಗಿ ಮಾಡಬಹುದು.

ಇಂದು ಕೋಣ, ಎತ್ತುಗಳನ್ನು ಬಳಸಿ ಉಳುಮೆ ಮಾಡಲು ಸಮಯ ತೆಗೆದುಕೊಳ್ಳುವುದರಿಂದ ನಿಂತ ನೀರಲ್ಲಿರುವ ಕೆಸರು ನೆನೆಯಲು ಸಮಯ ತೆಗೆದುಕೊಳ್ಳುತ್ತದೆ. ನೇಗಿಲುಗಳನ್ನು ಬಳಸುವುದರಿಂದ ಮಣ್ಣು ಒಂದೇ ಸಮನೆ ಕಲಸಿಕೊಳ್ಳುವುದಿಲ್ಲ.
ಇದರ ಬದಲು ಯಾಂತ್ರೀಕೃತವಾಗಿ ಕೆಸರು ತಯಾರಿಸಲು ಕೇಜ್ ವ್ಹೀಲ್ ಅಳವಡಿಸಿದ ಅಥವಾ ಪವರ್ ಟಿಲ್ಲರ್ ಅನ್ನು ಪರಿಣಾಮಕಾರಿಯಗಿ ಬಳಸಬಹುದು. ಅಲ್ಲದೆ ಸಮಯಾವಕಾಶವೂ ಕಡಿಮೆಯಾಗುತ್ತದೆ. ಅಲ್ಲದೆ ಭತ್ತದ ನಾಟಿ ಮಾಡಲು ನಾಟಿಯಂತ್ರದ ಬಳಕೆ ಮಾಡಬಹುದು. ಇದರಿಂದ ಆಳುಗಳ ಕೊರತೆಯನ್ನು ಸಮದೂಗಿಸಬಹುದು ಎಂದು ಅವರು ವಿವರಿಸಿದರು.
ಬಾಕ್ಸ್
ಚಾಪೆ ಅಥಾವ ಡಾಪೋಗ್ ವಿಧಾನ:
ಹೊರಾಂಗಣ, ಟೆರೇಸು, ಅಂಗಳದ ಭಾಗಶಹ ಬಿಸಿಲು ಬೀಳುವ ಜಾಗದಲ್ಲಿ ಒಣ ಮಡಿ ಮಾಡಿ ತೆಳು ಹಾಳೆಯನ್ನು ಹರಡಬೇಕು. ಇದಕ್ಕೆ ಎರಡು ಸೆಂ.ಮೀ ಬರುವಂತೆ ಕೊಟ್ಟಿಗೆ ಗೊಬ್ಬರ ಅಥವಾ ಕಾಂಪೋಸ್ಟ್ ಗೊಬ್ಬರ ಮತ್ತು ಹುಡಿ ಮಣ್ಣನ್ನು ಸಮಪ್ರಮಾಣದಲ್ಲಿ ಬೆರಸಿ ಹರಡಬೇಕು.
ಇದಕ್ಕೆ ಮೊಳಕೆ ಬರಿಸಿದ ಬೀಜವನ್ನು ಮಿಶ್ರಣದ ಮೇಲೆ ಪ್ರತಿ ಚದ ಮೀಟರ್ಗೆ ಒಂದು ಕಿ,ಗ್ರಾಂ ಬರುಉವಂತೆ(ಒಣ ತೂಕ) ಒಂದೇ ಸಮನಾಗಿ ಬಿತ್ತಬೇಕು. ನಂತರ ಬೀಜವನ್ನು ಹರಡಿ ಸಮವಾಗಿ ತಟ್ಟಬೇಕು..ನಂತರ ಇದಕ್ಕೆ ತೆಳುವಾದ ಹೊದಿಕೆ ಹಾಕಬೇಕು. ದಿನಂಪ್ರತಿ ತಪ್ಪದೆ ಎರಡು ಮೂರು ಬಾರಿ ನೀರು ಚಿಮುಕಿಸಬೇಕು.ಮೂರು-ನಾಲಕು ದಿನಗಳಲ್ಲಿ ಹೊದಿಕೆಯನ್ನು ತೆಗೆಯಬೇಕು. ಈ ವಿಧಾನದಲ್ಲಿ 18-20 ದಿನದಲ್ಲಿ ಸಸಿಗಳು ನಾಟಿಗೆ ಸಿದ್ಧವಾಗುತ್ತದೆ. ಈ ಚಾಪೆಯನ್ನು ಸುತ್ತಿ ಒಂದೆಡೆಯಿಂದ ಇನ್ನೊಂದೆಡೆಗೆ ಸುಲಭವಾಗಿ ಸಾಗಿಸಬಹುದು. ಇದನ್ನು ನಾಟಿಯಂತ್ರದ ಅಳತೆಗೆ ಸರಿಯಾಗಿ ಸಸಿ ಮಡಿಯನ್ನು ಚಾಕುವಿನಿಂದ ಕತ್ತರಿಸಿ ಯಂತ್ರಕ್ಕೆ ಜೋಡಿಸಬಹುದು ಎಂಬ ಮಾಹಿತಿಯನ್ನು ಬಾಬು ನೀಡಿದ್ದಾರೆ.
ಕಳೆ ನಿರ್ವಹಣೆಗೆ ರೋಟರಿ ವೀಡರ್ ಅಥವಾ ಕೋನೋವೀಡರ್ ಬಳಸಬಹುದು. ಅಲ್ಲದೆ ಕಟಾವು ಮಾಡಲು ಕಟಾವು ಯಂತ್ರವನ್ನು ಬಳಸಬಹುದು. ಎಂಬ ಮಾಹಿತಿ ಒದಗಿಸಿದ್ದಾರೆ.
ಈ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕಮ್ಮಾಜೆ ಗಂಗಾಧರ ರೈ ಆಗಮಿಸಿದರು. ಬಡಗಬೆಳ್ಳೂರು ವ್ಯ ವಾಸಾಯ ಸೇವಾಸಹಕಾರಿ ನಿರ್ಧೇಶಕ ಪ್ರಕಾಶ್ ಆಳ್ವ , ಸಹಾಯಕ ಕೃಷಿ ಅ ಧಿಕಾರಿ ಗಳಾದ ಕೊರಗಪ್ಪ, ಸಿದ್ಧಪ್ಪ, ಕೃಷಿಕರಾದ , ನಂದಪ್ಪ ರೈ, ರಮೇಶ್ ಪೂಜಾರಿ, ನಾರಾಯಣ ಕುಲಾಲ್, ಸಂಜೀವ ಪೂಜಾರಿ, ಹಸನಬ್ಬ , ಮತ್ತಿತರರು ಉಪಸ್ಥಿತರಿದ್ದರು. ಕು.ರಕ್ಷಿತಾ ಪ್ರಾರ್ಥಿಸಿ ನಾರಾಯಣ ನಾಯ್ಕ ಈ ಕಾರ್ಯಕ್ರಮವನ್ನು ಪ್ರಾಯೋಜಿಸಿ, ಸ್ವಾಗತಿಸಿದರು.







