ಬಂಟ್ವಾಳ : ಸಜಿಪ ಮೂಡ ಗ್ರಾಮದ ಅನ್ನಪಾಡಿ ಮಹಾಗಣಪತಿ ದೇವಸ್ಥಾನದ ಜೀರ್ಣೋದ್ಧಾರದ ಅಂಗವಾಗಿ ದೇವಾಲಯದ ವಠಾರದಲ್ಲಿ ಜೀರ್ಣೋದ್ಧಾರ ಸಮಿತಿ ಸಭೆಯು ಮಾಜಿ ತಾ.ಪಂ. ಅಧ್ಯಕ್ಷರಾದ ಯಶವಂತ ದೇರಾಜೆಯವರ ಅಧ್ಯಕ್ಷತೆಯಲ್ಲಿ 18-09-2016ರಂದು ಕರ ಸೇವೆಯನ್ನು ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಹಮ್ಮಿಕೊಳ್ಳಲು ತೀರ್ಮಾನಿಸಲಾಯಿತು.
ಕರಸೇವೆಯನ್ನು ತಾ.ಪಂ.ಅಧ್ಯಕ್ಷ ಚಂದ್ರಹಾಸ ಕರ್ಕೇರಾ ಉದ್ಘಾಟಿಸಲಿದ್ದು, ತಾ.ಪಂ.ಸದಸ್ಯ ಸಂಜೀವ ಪೂಜಾರಿ , ಮಾಜಿ ಜಿ. ಪಂ. ಸದಸ್ಯ ಸಂತೋಷ್ ಕುಮಾರ್ ರೈ ಬೋಳಿಯಾರ್, ಉದ್ಯಮಿ ಮಹಾಬಲ ಕೊಟ್ಟಾರಿ, ಗ್ರಾ.ಪಂ.ಸದಸ್ಯರಾದ ವಿಶ್ವನಾಥ ಬೆಳ್ಚಡ, ಯೋಗೀಶ್ ಬೆಳ್ಚಾಡ, ಧರ್ಮಸ್ಥಳ ಗ್ರಾ.ಯೋ.ವಲಯ ಮೇಲ್ವಿಚಾರಕ ನವೀನ್ ಶೆಟ್ಟಿ ಮೊದಲಾದವರು ಪಾಲ್ಗೊಳ್ಳಲಿದ್ದಾರೆ.
ಇದೇ ಸಂದರ್ಭದಲ್ಲಿ ಕಟೀಲು ಕ್ಷೇತ್ರದ ದುರ್ಗಾಪರಮೇಶ್ವರಿ ದೇವಿಯನ್ನು ಸಾಮಾಜಿಕ ಜಾಲ ತಾಣದಲ್ಲಿ ಅವಹೇಳನಕಾರಿಯಾಗಿ ನಿಂದಿಸಿದವರಿಗೆ ಸದ್ಬುದ್ಧಿಯನ್ನು ಅನುಗ್ರಹಿಸಿ ಮಹಾಗಣಪತಿ ದೇವಸ್ಥಾನದಲ್ಲಿ ಸಾಮೂಹಿ ಪ್ರಾರ್ಥನೆ ಸಲ್ಲಿಸಲಾಯಿತು. ಎಂ.ಸುಬ್ರಹ್ಮಣ್ಯ ಭಟ್, ಸುರೇಶ್ ಬಂಗೇರಾ, ಸದಾನಂದ ಶೆಟ್ಟಿ, ರಮೇಶ್ ಅನ್ನಪಾಡಿ, ವಾಸು ಗಟ್ಟಿ, ಕುಶಾಲಾಕ್ಷ, ಕುಶೇಷ, ಲಿಂಗಪ್ಪ, ಜಯಪ್ರಕಾಶ್, ದೇವದಾಸ್, ಮೋನಪ್ಪ ಮೂಲ್ಯ, ಸುರೇಶ್ ಸಾರ್ತಾವು, ಪುರಂಧರ, ಪ್ರಶಾಂತ್, ಮೊದಲಾದವರು ಪಾಲ್ಗೊಂಡಿದ್ದರು.
