ಬಂಟ್ವಾಳ : ಹಿಂದೂ ಧಾರ್ಮಿಕ ಸೇವಾ ಸಮಿತಿ ಬಿ.ಸಿ.ರೋಡ್ ಇದರ ಆಶ್ರಯದಲ್ಲಿ 37ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಪುರಸಭಾಧ್ಯಕ್ಷ ರಾಮಕೃಷ್ಣ ಆಳ್ವ ರವರನ್ನು ತಹಶೀಲ್ದಾರ್ ಪುರಂಧರ ಹೆಗ್ಡೆ ಸನ್ಮಾನಿಸಿದರು.
ಸಮಿತಿ ಅಧ್ಯಕ್ಷ ಸತೀಶ್ ಭಂಡಾರಿ, ಸಂಸ್ಕಾರ ಭಾರತಿ ಜಿಲ್ಲಾ ಸಂಚಾಲಕ ಸೂರ್ಯನಾರಾಯಣ ಕಶೆಕೋಡಿ , ವಿಹಿಂಪ ಜಿಲ್ಲಾ ಕಾರ್ಯಾಧ್ಯಕ್ಷ ಜಿತೇಂದ್ರ ಕೊಟ್ಟಾರಿ, ಪುರಸಭಾ ಸದಸ್ಯ ಬಿ.ಮೋಹನ್, ಲೋಕನಾಥ ಶೆಟ್ಟಿ, ಸುರೇಶ್ ಕುಮಾರ್ ಕೈಕಂಬ, ರಾಜೇಶ್ ಕುಮಾರ್ ಬಿ.ಸಿ.ರೋಡ್, ಸತೀಶ್ ಶೆಟ್ಟಿ ಮೊಡಂಕಾಪು ಉಪಸ್ಥಿತರಿದ್ದರು.
