ಬಂಟ್ವಾಳ: ಬಂಟ್ವಾಳ ಮೂಡ ಗ್ರಾಮದ ಮಯ್ಯರಬೈಲು ಎಂಬಲ್ಲಿ ಅಕ್ರಮವಾಗಿ ಪರವಾಣೆಗೆ ಇಲ್ಲದೇ ಮೂಡಿಗೆರೆ ಕಡೆಯಿಂದ ಮಾವು ದಿಮ್ಮಿಗಳನ್ನು ಸಾಗಾಟ ಮಾಡುತ್ತಿರುವ ಪ್ರಕರಣವನ್ನು ಬಂಟ್ವಾಳ ವಲಯ ಅರಣ್ಯಾಧಿಕಾರಿಯವರು ಪತೆಹಚ್ಚಿ ಕೇಸು ದಾಖಲಿಸಿದ್ದು, ಸುಮಾರು 4 ಲಕ್ಷ ಮೌಲ್ಯದ ವಾಹನ ಮತ್ತು ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕಾರ್ಯಾಚರಣೆಯಲ್ಲಿ ಬಂಟ್ವಾಳ ವಲಯ ಅರಣ್ಯಾಧಿಕಾರಿ ಸುಬ್ರಹ್ಮಣ್ಯ ರಾವ್, ಉಪ ವಲಯ ಅರಣ್ಯಾಧಿಕಾರಿ ಪ್ರೀತಂ ಎಸ್, ಅರಣ್ಯ ರಕ್ಷಕರಾದ ವಿನಯ ಕುಮಾರ್, ಜಿತೇಶ್ ಪಿ, ಚಿದಾನಂದ ಬಿ, ವಾಹನ ಚಾಲಕ ಜಯರಾಮ್, ಅರಣ್ಯ ವೀಕ್ಷಕ ಭಾಸ್ಕರ್ ಡಿ ಪಾಲ್ಗೊಂಡಿದ್ದರು.
ಈ ಪ್ರಕರಣದ ಮುಂದಿನ ತನಿಖೆಯನ್ನು ಮಂಗಳೂರು ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಕೆ.ಟಿ. ಹನುಮಂತಪ್ಪ ಇವರ ನಿರ್ದೇಶನದಂತೆ ಮಂಗಳೂರು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಧರ ನಾಯ್ಕ್ ಇವರಿಗೆ ವಹಿಸಿದ್ದಾರೆ.
