ಬಂಟ್ವಾಳ : ಶ್ರೀ ಗುರು ಕೋ-ಅಪರೇಟಿವ್ ಸೊಸೈಟಿ(ನಿ) ಬಿರ್ವಸೆಂಟರ್ ಮೆಲ್ಕಾರ್ ಪಾಣೆಮಂಗಳೂರು ಇದರ 2015-16ನೇ ಸಾಲಿನ ವಾರ್ಷಿಕ ಮಹಾಸಭೆಯು ಸಂಘದ ಆವರಣದಲ್ಲಿ ಸೇಸಪ್ಪ ಕೋಟ್ಯಾನ್ ರವರ ಅಧ್ಯಕ್ಷತೆಯಲ್ಲಿ ಜರಗಿತು. ಸಂಘವು 2015-16ನೇ ಸಾಲಿನ ಮಾರ್ಚ್ ತಿಂಗ ಳ ಕೊನೆಗೆ 6ಕೋಟಿ ರೂಪಾಯಿ ಠೇವಣಿ ಸಂಗ್ರಹಿಸಿ 5ಕೋಟಿ 70ಲಕ್ಷ ರೂ.ಗಳ ಸಾಲ ನೀಡಲಾಗಿದೆ. ಮುಂದಿನ ವರ್ಷದಲ್ಲಿ 8ಕೋಟಿ ಠೇವಣಿ ಸಂಗ್ರಹದ ಗುರಿ ಹೊಂದಲಾಗಿದೆ ಎಂದು ಸಂಘದ ಕಾರ್ಯ ಚಟುವಟಿಕೆಗಳ ಬಗ್ಗೆ ಉಪಾಧ್ಯಕ್ಷ ಕೆ.ಹರಿಕೃಷ್ಣ ಬಂಟ್ವಾಳ್ ಮಾಹಿತಿ ನೀಡಿದರು. ಸಂಘವು 2015-16ನೇ ಸಾಲಿನಲ್ಲಿ ಒಟ್ಟು ಸುಮಾರು 31ಕೋಟಿ ರೂ. ವ್ಯವಹಾರ ಮಾಡಿದ್ದು 6,24,566.00 ರೂ.ನಿವ್ವಳ ಲಾಭ ಗಳಿಸಿದ್ದು ಸದಸ್ಯರಿಗೆ ಶೇ.12ರಂತೆ ಡಿವಿಡೆಂಡ್ ನೀಡುವುದೆಂದು ಸಭೆಯಲ್ಲಿ ಸರ್ವಾನುಮತದಿಂದ ತೀರ್ಮಾನಿಸಲಾಯಿತು.

kar_2546ಸಂಘದ ನಿರ್ದೇಶಕರಾದ ಕೆ.ಸಂಜೀವ ಪೂಜಾರಿಯವರು ಸ್ವಸಹಾಯ ಗುಂಪು ರಚನೆ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ನಿರ್ದೇಶಕರುಗಳಾದ ನಾರಾಯಣ ಪೂಜಾರಿ ಬೊಳ್ಳುಕಲ್ಲು, ಸಂತೋಷ್ ಕುಮಾರ್ ಕೊಟ್ಟಿಂಜ, ಪುಷ್ಪಾವತಿ ಉಪಸ್ಥಿತರಿದ್ದರು. ಸಂಘದ ವರದಿ ಮತ್ತು ಲೆಕ್ಕಪತ್ರಗಳನ್ನು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರವೀಣ್ ಮಂಡಿಸಿದರು. ನಿರ್ದೇಶಕ ರತ್ನಾಕರ ನಾಡಾರು ವಂದಿಸಿ ನಿರ್ದೇಶಕ ರಮೇಶ್ ಅನ್ನಪಾಡಿ ಕಾರ್ಯಕ್ರಮ ನಿರ್ವಹಿಸಿದರು.

By suddi9

Leave a Reply

Your email address will not be published. Required fields are marked *