ಬಂಟ್ವಾಳ ಬಿ.ಸಿ.ರೋಡ್ ರಂಗೋಲಿ ರಾಜಾಂಗಣದಲ್ಲಿ ಸೆ.11ರಂದು ಬಂಟವಾಳದ ಬಂಟರ ಭವನ ಲೋಕರ್ಪಣೆ ಆಮಂತ್ರಣ ಪತ್ರವನ್ನು ಬಂಟವಾಳದ ಬಂಟರ ಸಂಘದ ಅಧ್ಯಕ್ಷ ವಿವೇಕ್ ಶೆಟ್ಟಿ ನಗ್ರಿಗುತ್ತು ಬಿಡುಗಡೆ ಮಾಡಿದರು. ಅ.30ರಂದು ಬಂಟರ ಭವನ ಉದ್ಘಾಟನೆಗೊಳ್ಳಲಿದೆ. ತುಂಬೆ ಗ್ರಾಮ ರಾಷ್ಟ್ರೀಯ ಹೆದ್ದಾರಿ ವಳವೂರು ನೇತ್ರಾವತಿ ನದಿ ದಂಡೆಯಲ್ಲಿ ಸುಮಾರು 18ಕೋಟಿ ರೂ.ವೆಚ್ಚದ ನೂತನ ಬಂಟರ ಭವನ ಯಾವುದೇ ಕ್ರಾರ್ಯಕ್ರಮ ನಡೆಸುವ ಸರ್ವ ಸೌಲಭ್ಯ ಹೊಂದಿರುವಂತೆ ಯೋಜಿಸಲಾಗಿದೆ. ಹಿರಿಯ ಸಾಗಿತಿ ಡಾ.ಏರ್ಯ ಲಕ್ಷ್ಮೀನಾರಾಯಣ ಆಳ್ವ ಉಪಾಧ್ಯಕ್ಷ ಕಿರಣ್ ಹೆಗ್ಡೆ ಅನಂತಾಡಿ, ಪ್ರಪುಲ್ಲ ಆರ್.ರೈ ವಿಠಲಕೋಡಿ, ಕಾರ್ಯದರ್ಶಿ ಚಂದ್ರಹಾಸ ಡಿ.ಶೆಟ್ಟಿ ರಂಗೋಲಿ, ಜೊತೆ ಕಾರ್ಯದರ್ಶಿ ನವೀನ್ ಚಂದ್ರ ಶೆಟ್ಟಿ, ಮುಂಡಾಜೆಗುತ್ತು, ಕಟ್ಟಡ ಸಮಿತಿ ಉಪಾಧ್ಯಕ್ಷ ಲೋಕನಾಥ್ ಶೆಟ್ಟಿ, ಕೋಶಾಧಿಕಾರಿ ಜಗದೀಶ್ ಶೆಟ್ಟಿ, ಇರಾಗುತ್ತು, ಸಂಘಟನಾ ಕಾರ್ಯದರ್ಶಿ ಚಂದ್ರಹಾಸ ರೈ ಬಾಲಾಜಿಬೈಲು ಮೊದಲಾದವರು ಉಪಸ್ಥಿತರಿದ್ದರು.

001

002

By suddi9

Leave a Reply

Your email address will not be published. Required fields are marked *