ಕೈಕಂಬ: ಕಸವನ್ನು ವಿಂಗಡಿಸುವುದರಿಂದ ಘನ ತ್ಯಾಜ್ಯ ವಿಲೇವಾರಿಯನ್ನು ಸರಿಯಾಗಿ ನಿರ್ವಹಿಸಲು ಸಾಧ್ಯವಾಗುತ್ತದೆ. ಮೂಲದಲ್ಲೇ ಹಸಿ ಕಸ ಮತ್ತು ಒಣ ಕಸವನ್ನು ಬೇರೆ ಬೇರೆಯಾಗಿ ಸಂಗ್ರಹಿಸುವುದರಿಂದ ಹಸಿ ಕಸವನ್ನು ಕಂಪೋಸ್ಟ್ ಮಾಡಲು, ಒಣ ಕಸವನ್ನು ಮರುಬಳಕೆ ಮಾಡಲು ಸಹಾಯ ಆಗುತ್ತದೆ. ಇಂದಿನ ಸುಶಿಕ್ಷಿತ ನಾಗರಿಕರು ಕಸ ವಿಲೇವಾರಿಯನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ಸಹಕರಿಸುತ್ತಾರೆ.
ಕಸ ವಿಂಗಡಣೆ:
ಒಣ ಕಸ: ಪೇಪರ್, ಪ್ಲಾಸ್ಟಿಕ್, ಗಾಜು, ರಬ್ಬರ್, ಬಟ್ಟೆ ಬರೆ, ಚರ್ಮದ ವಸ್ತು, ರೆಕ್ಸಿನ್, ವಸ್ತು ಲೋಹ ಸಾಧನ, ಧರ್ಮೋಕಾಲ್, ಕಟ್ಟಿಗೆ.
ಹಸಿ ಕಸ: ಅಡುಗೆ ಮನೆ ಕಸಗಳಾದ ತರಕಾರಿ, ಹಣ್ಣು ಹಂಪಲು ಉಳಿಕೆ, ಉಪಯೋಗಿಸಿದ ಟೀ ಪ್ಯಾಕೇಟ್, ಎಲುಬು ಮತ್ತು ಮೀನಿನ ಮುಳ್ಳು, ಉಪಯೋಗಿಸಲಾಗದ ಆಹಾರ ಇತ್ಯಾದಿ.


ಕಸ ವಿಂಗಡನೆ ಸರಿಯಾಗದಿದ್ದಲ್ಲಿ ತ್ಯಾಜ್ಯ ವಿಲೇವಾರಿಯಲ್ಲಿ ಲೋಪ ಆಗುವುದು, ಕಸವನ್ನು ಭೂಮಿಯಲ್ಲಿ ಹುದುಗಿದಾಗ ಮಣ್ಣು ಮತ್ತು ನೀರು ಮಾಲಿನ್ಯ ಆಗಬಹುದು, ಮಿಥೇನ್ ಅನಿಲ ಬಿಡುಗಡೆ ಆಗಬಹುದು, ಇದು ಅತ್ಯಂತ ಅಪಾಯಕಾರಿ ಗ್ರೀನ್ ಹೌಸ್ ಅನಿಲ, ಕಸ ಸರಿಯಾಗಿ ವಿಂಗಡಿಸಿ ವಿಲೇವಾರ ಮಾಡದಿದ್ದರೆ ಅನಾರೋಗ್ಯಕ್ಕೆ ಕಾರಣ ಆಗಬಹುದು.

