ಕೈಕಂಬ: ಮಂಗಳೂರು ತಾಲೂಕು ಗುರುಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟ ಅಡ್ಡೂರು ಬಳಿ ಪಲ್ಘೂಣಿ ಸೇತುವೆಯ ಬಳಿ ಬೃಹದಾಕಾರದ ಕೊಳಕು ತ್ಯಾಜ್ಯದ ರಾಶಿಯೊಂದು ದಿನದಿಂದ ದಿನಕ್ಕೆ ಬೆಳೆಯುತ್ತಲೇ ಇದೆ ತ್ಯಾಜ್ಯದ ರಾಶಿಯಲ್ಲಿ ಘನ, ದ್ರವ , ಮಾಂಸಹಾರಿ, ಕೊಳಕು ತ್ಯಾಜ್ಯಗಳು ಸೇರಿದಂತೆ ಸತ್ತನಾಯಿಯ ಶವಗಳನ್ನು ಸೇರಿಸಿಕೊಂಡಿದೆ.

14-vp-thyaja-rasi-1

ಪರಿಸರದಲ್ಲಿ ದುರ್ನಾತ ಬೀರುತ್ತಿದ್ದರು ಸ್ಥಳೀಯರು ಮೂಗು ಮುಚ್ಚಿಕೊಂಡು ಹೋಗುತ್ತಾರೆಯೇ ಹೋರತು ಆಡಳಿತದ ಗಮನ ಸೆಳೆದಿಲ್ಲ. ಆಡಳಿತದವರು ಈ ವಿಚಾರ ತಮಗೇ ಗೊತ್ತೆ ಇಲ್ಲ ಎಂಬ ರೀತಿಯಲ್ಲಿ ಸೈಲೇಂಟಾಗಿದ್ದು ಯಾವೂದೇ ಪರಿಹಾರ ಕ್ರಮ ಕೈಗೊಳ್ಳುವ ಮುನ್ಸೂಚನೆ ಇನ್ನೂ ಕಂಡುಬರುತ್ತಿಲ್ಲ ಸಾರ್ವಜನಿಕ ಹಿತಾಶಕ್ತಿಯ ಈ ಕಳಕಳಿಗೆ ಸಂಬಂಧಪಟ್ಟವರು ತುರ್ತು ಕಾರ್ಯಚರಣೆ ನಡೆಸುವರೇ ಎಂಬ ಕಾತರ ಸಾರ್ವಜನಿಕರಲ್ಲಿದೆ.

14-vp-thyaja

By suddi9

Leave a Reply

Your email address will not be published. Required fields are marked *