ಕೈಕಂಬ:ಅಮ್ಮುಂಜೆ ಗ್ರಾಮದ ಮಾದುಕೋಡಿ ಕೊರಗಜ್ಜನ ಸಾನಿಧ್ಯದಲ್ಲಿ ಚಂಡಿಕಾ ಯಾಗ ಮತ್ತು ಕೊರಗಜ್ಜ ದೈವದ ಕೊಲ ಬಲಿ ಸೇವೆಯು ಭಾನುವಾರ ಜರಗಲಿದೆ. ಫೆ.11 ರಂದು ಶನಿವಾರ ಸಂಜೆ 5 ರಿಂದ ವಾಸ್ತು ಹೋಮ, ರಾಕ್ಷೋಘ್ನ ಹೋಮ, ವಾಸ್ತುಬಲಿ ಸಂಜೆ 6ರಿಂದ ರಾತ್ರಿ 10ರ ತನಕ ವಿವಿಧ ಭಜನಾಮಂಡಳಿಗಳಿಂದ ಭಜನೆ ಫೆ. 12ರಂದು ಭಾನುವಾರ ಗಣಹೋಮ,ಕಲಾಹೋಮ, ನವಕಪ್ರಧಾನ ಕಲಶ ಬೆಳಗ್ಗೆ ರಿಂದ ಚಂಡಿಕಾಯಾಗ ಪ್ರಾರಂಭ ಮಧ್ಯಾಹ್ನ 12 ಕ್ಕೆ ಪೂರ್ಣಾಹುತಿ ,ಪ್ರಸಾದ ವಿತರಣೆ ನಂತರ ಅನ್ನ ಸಂತರ್ಪಣೆ ರಾತ್ರಿ 7 ಗಂಟೆಗೆ ಕೊರಗಜ್ಜ ದೈವದ ಕೋಲ ಬಲಿ ಸೇವೆ ಜರಗಲಿದೆ. ಎಂದು ಶ್ರೀ ಸಾಯಿ ಹೀಲಿಂಗ್ ಸೆಂಟರ್ ವಿಜಯ ಸುವರ್ಣ ಪೊಳಲಿ ತಿಳಿಸಿದ್ದಾರೆ.
