ಕೈಕಂಬ: ಪೊಲೀಸ್ ಜನಸಂಪರ್ಕ ಸಭೆ ಹಾಗೂ ಗ್ಯಾಸ್ ಬಳಕೆದಾರರಿಗೆ ಮಾಹಿತಿ ಶಿಬಿರವು ಕುಪ್ಪೆಪದವು ನ್ಯೂ ಜ್ಯೂನಿಯರ್ ಫ್ರೆಂಡ್ಸ್ ಕ್ಲಬ್ , ಸೌಹಾರ್ದ ಸ್ಪೋಟ್ಸ್ ಕ್ಲಬ್ , ನ್ಯೂ ಫ್ರೆಂಡ್ಸ್ ಕ್ಲಬ್ ಕುಪ್ಪೆಪದವು ಇದರ ಜಂಟಿ ಆಶ್ರಯದಲ್ಲಿ ಬಜಪೆ ಪೊಲೀಸ್ ಠಾಣೆ ಮತ್ತು ಪದ್ಮಶ್ರೀ ಗ್ಯಾಸ್ ಏಜನ್ಸಿ ಮೂಡಬಿದ್ರೆ ಇದರ ಸಹಯೋಗದೊಂದಿಗೆ ಮಾ. 26ರಂದು ಕುಪ್ಪೆಪದವು ಕಾವೇರಿ ವಿದ್ಯಾಲದ ಸಭಾಂಗಣದಲ್ಲಿ ನಡೆಯಲಿದೆ. ಸಮಾರಂಭದ ಅಧ್ಯಕ್ಷತೆಯನ್ನು ಸಹಾಯಕ ಕಮೀಷನರ್ ಆಫ್ ಪೊಲೀಸ್ ರಾಜೇಂದ್ರ ಪ್ರಸಾದ್ ಪಿ ಎಸ್ ವಹಿಸಲಿದ್ದಾರೆ.
ಉದ್ಘಾಟನೆಯನ್ನು ಪದ್ಮಶ್ರೀ ಗ್ಯಾಸ್ ಏಜನ್ಸಿ ಮಾಲಕ ಅಭಿಜಿತ್ ಜೈನ್ ನೆರವೇರಿಸಲಿದ್ದಾರೆ. ಮುಖ್ಯ ಅಥಿತಿಗಳಾಗಿ ಟಿ ಡಿ ನಾಗರಾಜ್ ಎಸ್ ಐ ಬಜಪೆ ಪೊಲೀಸ್ ಠಾಣೆ , ಕುಪ್ಪೆಪದವು ಗ್ರಾ. ಪಂ .ಅಧ್ಯಕ್ಷೆ ಲೀಲವತಿ ಆನಂದ್, ಗ್ರಾ.ಪಂ ಉಪಾಧ್ಯಕ್ಷ ಡಿ.ಪಿ. ಹಮ್ಮಬ್ಬ ಭಾಗವಹಿಸಲಿದ್ದಾರೆ. ಫ್ರೆಂಡ್ಸ್ ಕ್ಲಬ್ ಇದರ ಮುಖ್ಯಸ್ಥರಾದ ಎಮ್ ಶರೀಫ್, ಅಬುಬಕ್ಕರ್ ,ಹಸನ್ ಬಾವ ಮಾಣಿಪಲ್ಲ,ಕೆ.ಉಂಙ , ಬಿ.ಎ.ಅಬುಬಕ್ಕರ್ ಕಲ್ಲಾಡಿ, ಕೆ.ಆದಂ, ಅಬ್ದುಲ್ ರಹಿಮಾನ್, ಮಹಮ್ಮದ್,ತಾಸೀರ್, ರಫೀಕ್ ಅಚಾರಿಚೋರ, ಬಾಲಕೃಷ್ಣ ಮತ್ತಿತರರು ಉಪಸ್ಥಿತರಿರುವರು. ಎಂದು ಪ್ರಕಟನೆ ತಿಳಿಸಿದೆ.