ಬಂಟ್ವಾಳ: ಬದಲಾಗುತ್ತಿರುವ ಪ್ರಸಕ್ತ ದಿನಗಳಲ್ಲಿ ದೃಶ್ಯ ಮಾಧ್ಯಮವು ವಿಶ್ವಾಸಾರ್ಹತೆಯನ್ನು ಉಳಿಸಿಕೊಂಡು ಹೋಗುವುದರ ಜೊತೆಗೆ ಸವಾಲುಗಳನ್ನು ಎದುರಿಸಬೇಕಾದ ಅನಿವಾರ್ಯತೆ ಇದೆ ಎಂದು ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸ್ಥಾಪಕಾಧ್ಯಕ್ಷ ಪ್ರೊ. ಬಾಲಕೃಷ್ಣ ಗಟ್ಟಿ ಹೇಳಿದ್ದಾರೆ.ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಬಂಟ್ವಾಳ ಪ್ರೆಸ್‍ಕ್ಲಬ್ ಮತ್ತು ರಜತ ವರ್ಷಾಚರಣೆ ಸಮಿತಿ ಬಿ.ಸಿ.ರೋಡ್ ಲಯನ್ಸ್ ಸೇವಾ ಮಂದಿರದಲ್ಲಿ ಮಂಗಳವಾರ ಹಮ್ಮಿಕೊಂಡ ರಜತ ವರ್ಷಾಚರಣೆಯ ಸಮಾರೋಪ ಸಂಭ್ರಮದ ಪ್ರಯಕ್ತ ನಡೆದ ವಿಚಾರ ಸಂಕಿರಣದ ಸಭಾಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.21-8

1 (1)

21-13

21-4

21-5 21-6 21-7

21-1

21-2

21-3

21-11

21-12ದೃಶ್ಯ ಮಾಧ್ಯಮಗಳು ಬಂದರೂ ಪತ್ರಿಕೆಗಳು ಇಂದು ತಮ್ಮ ವಿಶ್ವಾಸಾರ್ಹತೆಯನ್ನು ಉಳಿಸಿಕೊಂಡಿದೆ ಎಂದ ಅವರು ವಿದ್ಯಾರ್ಥಿಗಳು ಪ್ರತಿದಿನ ಪತ್ರಿಕೆ ಹಾಗೂ ಪುಸ್ತಕಗಳನ್ನು ಓದುವ ಮೂಲಕ ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು.ವಿಚಾರಸಂಕಿರಣ ಕಾರ್ಯಕ್ರಮವನ್ನು ಟಿ.ವಿ. ನಿರೂಪಕಿ ನವಿತಾ ಜೈನ್ ಉದ್ಘಾಟಿಸಿದರು. ಬಳಿಕ ಅವರು ದೃಶ್ಯ ಮಾಧ್ಯಮ ಮತ್ತು ಶ್ರವಣ ಮಾಧ್ಯಮ ಭವಿಷ್ಯದ ಸವಾಲುಗಳು ಎಂಬ ವಿಷಯದ ಬಗ್ಗೆ ವಿಚಾರ ಮಂಡಿದರೆ ಕರ್ನಾಟಕ ರಾಜ್ಯ ಮಾಧ್ಯಮ ಅಕಾಡಮಿ ಕಾರ್ಯದರ್ಶಿ ಬಿ.ವೆಂಕಟಸಿಂಗ್ ಮುದ್ರಣ ಮಾಧ್ಯಮ ಮತ್ತು ಅಂತರ್ಜಾಲ ಮಾಧ್ಯಮ ಭವಿಷ್ಯದ ಸವಾಲುಗಳು ಕುರಿತು ವಿಷಯ ಮಂಡಿಸಿದರು. ಎರಡೂ ವಿಚಾರ ಸಂಕಿರಣದ ಬಳಿಕ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಯಿತು. ಅತಿಥಿಯಾಗಿ ಭಾಗವಹಿಸಿದ್ದ ಮಂಗಳೂರು ಪ್ರೆಸ್‍ಕ್ಲಬ್ ಅಧ್ಯಕ್ಷ ಡಾ. ರೊನಾಲ್ಡ್ ಅನಿಲ್ ಫರ್ನಾಂಡಿಸ್ ಅವರನ್ನು ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಪ್ರೆಸ್‍ಕ್ಲಬ್ ಅಧ್ಯಕ್ಷ ಪ್ರಶಾಂತ ಪುಂಜಾಲಕಟ್ಟೆ, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮೌನೇಶ ವಿಶ್ವಕರ್ಮ, ರಜತ ವರ್ಷಾಚರಣಾ ಸಮಿತಿ ಅಧ್ಯಕ್ಷ ಇಬ್ರಾಹೀಂ ಅಡ್ಕಸ್ಥಳ, ಪತ್ರಕರ್ತ ಹರೀಶ ಕೆ.ಆದೂರು ಉಪಸ್ಥಿತರಿದ್ದರು. ಮೌನೇಶ ವಿಶ್ವಕರ್ಮ ಸ್ವಾಗತಿಸಿದರು. ರಜತ ವರ್ಷಾಚರಣಾ ಸಮಿತಿ ಸಂಚಾಲಕ ವೆಂಕಟೇಶ ಬಂಟ್ವಾಳ ವಂದಿಸಿದರು. ರಂಗಕರ್ಮಿ ಎಚ್.ಕೆ.ನಯನಾಡು ಕಾರ್ಯಕ್ರಮ ನಿರೂಪಿಸಿದರು. ಪತ್ರಕರ್ತರಾದ ಸಂದೀಪ ಸಾಲ್ಯಾನ್, ಯಾದವ ಕುಲಾಲ್, ಚಂದ್ರಶೇಖರ ಕಲ್ಮಲೆ, ಕಿಶೋರ್ ಪೆರಾಜೆ, ಇಮ್ತಿಯಾಝ್ ಶಾ, ವಾಮನ ಪೂಜಾರಿ, ಉದಯಶಂಕರ ನೀರ್ಪಾಜೆ, ಮಹಮ್ಮದ್ ಅಲಿ, ಜನಾರ್ದನ ವಿಟ್ಲ ಸಹಕರಿಸಿದರು.

By suddi9

Leave a Reply

Your email address will not be published. Required fields are marked *