ಕುಪ್ಪೆಪದವು :  ನೂತನವಾಗಿ ಘೋಷಣೆಯಾಗಿರುವ ಮೂಡುಬಿದಿರೆ ತಾಲೂಕಿಗೆ ಮುತ್ತೂರು ಮತ್ತು ಕುಲವೂರು ಗ್ರಾಮಗಳನ್ನು ಸೇರ್ಪಡೆಗೊಳಿಸಿರುವುದನ್ನು ವಿರೋಧಿಸಿ, ಸೇರ್ಪಡೆಯನ್ನು ಕೈ ಬಿಡಬೇಕೆಂದು ಸರಕಾರವನ್ನು ಒತ್ತಾಯಿಸಿ ಮುತ್ತೂರು ಗ್ರಾಮಸಭೆಯಲ್ಲಿ ಒಕ್ಕೊರಳ ಧ್ವನಿಯಲ್ಲಿ ಆಗ್ರಹ ನಿರ್ಣಯವನ್ನು ಅಂಗೀಕರಿಸಲಾಗಿದೆ.ಈ ಭಾಗದ ಜನರು ಜಿಲ್ಲಾ ಪಂಚಾಯತ್ ಮತ್ತು ಜಿಲ್ಲಾಧಿಕಾರಿಗಳ ಕಚೇರಿಯ ಕೆಲಸಗಳಿಗಾಗಿ ಮಂಗಳೂರಿಗೆ, ಉಪನೋಂದಾವಣಾ ಕಚೇರಿಯ ಕೆಲಸಗಳಿಗಾಗಿ ಬಂಟ್ವಾಳಕ್ಕೆ ಹೋಗಬೇಕಾಗಿದ್ದು, ಇದೀಗ ಈ ಗ್ರಾಮಗಳು ಮೂಡುಬಿದಿರೆ ತಾಲೂಕಿಗೆ ಸೇರ್ಪಡೆಗೊಂಡರೆ ತಾಲೂಕು ಪಂಚಾಯತ್ ಮತ್ತು ತಾಲೂಕು ಕಚೇರಿಯ ಕೆಲಸಗಳಿಗಾಗಿ ಮೂಡುಬಿದಿರೆಗೆ ಹೀಗೆ ಬೇರೆ ಬೇರೆ ಕಚೇರಿಯ ಕೆಲಸಗಳಿಗಾಗಿ ಬೇರೆ ಬೇರೆ ತಾಲೂಕು ಕೇಂದ್ರಗಳಿಗೆ ಸುತ್ತಾಡಬೇಕಾದ ಅನಿವಾರ್ಯತೆ ಎದುರಾಗಲಿದೆ. ಆದ್ದರಿಂದ ಈ ಎರಡು ಗ್ರಾಮಗಳನ್ನು ಮೂಡುಬಿದಿರೆ ತಾಲೂಕಿಗೆ ಸೇರ್ಪಡೆಗೊಳಿಸಿರುವುದನ್ನು ಕೈ ಬಿಟ್ಟು ಮಂಗಳೂರು ತಾಲೂಕಿನಲ್ಲೇ ಉಳಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.Muthur Gramasabhe
ಮುತ್ತೂರು ಗ್ರಾಮ ಪಂಚಾಯತ್‍ಗೆ ಸ್ವಂತ ಕಟ್ಟಡ ನಿರ್ಮಿಸಲು 25 ಸೆಂಟ್ಸ್ ನಿವೇಶನ ನೀಡುವಂತೆ ಸಲ್ಲಿಸಿದ ಮನವಿಯನ್ನು ಪುರಸ್ಕರಿಸಿ ಸರಕಾರ ಆದೇಶ ನೀಡಿದೆ. ಅದರ ಕಡತದ ಬಗ್ಗೆ ತಾಲೂಕು ಕಚೇರಿಯಲ್ಲಿ ವಿಚಾರಿಸಿದರೆ ನಾಡ ಕಚೇರಿಗೆ ಕಳುಹಿಸಲಾಗಿದೆ ಎಂದು ಹೇಳುತ್ತಾರೆ, ನಾಡ ಕಚೇರಿಯಲ್ಲಿ ವಿಚಾರಿಸಿದರೆ ಕಡತ ಇಲ್ಲಿಗೆ ಬಂದಿಲ್ಲ ಎನ್ನುತ್ತಾರೆ, ಯಾಕೆ ಈ ರೀತಿ ಸತಾಯಿಸುತ್ತೀರಿ ಎಂದು ಕಂದಾಯ ನಿರೀಕ್ಷಕರನ್ನು ಗ್ರಾಮಸ್ತರು ಪ್ರಶ್ನಿಸಿದರು. ಸರಕಾರಿ ಅಧಿಕಾರಿಗಳ ನಿರ್ಲಕ್ಷ್ಯದ ಧೋರಣೆಯನ್ನು ಆಕ್ಷೇಪಿಸಿದರು.
ಬಜಪೆ ಠಾಣೆಯ ಅಪರಾಧ ಪತ್ತೆ ವಿಭಾಗದ ಪಿಎಸ್‍ಐ ರಾಜಾರಾಮ್‍ರವರು ಅಪರಾಧ ಮತ್ತು ಅಪಘಾತ ಮುಕ್ತವಾದ ಸುಂದರ, ಸಾಮರಸ್ಯದ ಸಮಾಜ ನಿರ್ಮಾಣಕ್ಕಾಗಿ ಪೊಲೀಸರೊಂದಿಗೆ ಸಹಭಾಗಿತ್ವ ಮತ್ತು ಸಹಕಾರ ನೀಡುವಂತೆ ಕೋರಿದರು. ಸಹಾಯಕ ಕೃಷಿ ನಿರ್ದೇಶಕರಾದ ನಾಗರಾಜ್ ನೋಡಲ್ ಅಧಿಕಾರಿಯಾಗಿ ಆಗಮಿಸಿದ್ದರು. ವಿವಿಧ ಇಲಾಖೆಗಳ ಅಧಿಕಾರಿಗಳು ಸರಕಾರದ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ಗ್ರಾಮ ಪಂಚಾಯತ್ ಅಧ್ಯಕ್ಷರು, ಸದಸ್ಯರು ಸಭೆಯಲ್ಲಿ ಹಾಜರಿದ್ದರು.

By suddi9

Leave a Reply

Your email address will not be published. Required fields are marked *