ಬಂಟ್ವಾಳ:ಇಲ್ಲಿನ ಜಕ್ರಿಬೆಟ್ಟು ವಿನಲ್ಲಿ ನೇತ್ರಾವತಿ ನದಿ ನೀರಿನಲ್ಲಿ ಬಟ್ಟೆ ಒಗೆಯುತ್ತಿದ್ದ ವೇಳೆ ಸಿಡಿಲು ಬಡಿದು ಇಬ್ಬರು ಮಗು ಸಹಿತ ಇಬ್ಬರು ಮಹಿಳೆಯರು ಮ್ತತಪಟ್ಟ ಘಟನೆ ಬುಧವಾರ ಸಂಜೆ ನಡೆದಿದೆ.ತುಮಕೂರು ಜಿಲ್ಲೆಯ ಹಿರಿಯೂರು ತಾ.ನಜವನಗೊಂಡ ಹೋಬಳಿಯ ಜಾಗರೆ ಎಂಬಲ್ಲಿನನಿವಾಸಿಗಳಾದ ಹನುಮಕ್ಕ ಹಾಗೂ ಜಯಮ್ಮ ಸ್ಥಳದಲ್ಲೆ ಮ್ರತಪಟ್ಟರೆ ,ಅಸ್ವಸ್ಥಗೊಂಡ ಮಗು ಅಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮ್ತಪಟ್ಟಿದೆ.ಮತ್ತೊಬ್ಬರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಬಂಟ್ವಾಳ ಪುರಸಭಾ ವ್ಯಾಪ್ತಿಯ ಸಮಗ್ರ ಕುಡಿಯುವ ನೀರಿನ ಯೋಜನೆಯ ಕಾಮಗಾರಿಯ ಕಾರ್ಮಿಕರಾಗಿ ದುಡಿಯಲು ಬಂದಿದ್ದರು.ಸಂಜೆ ಮೂರು ಗಂಟೆ ಸುಮಾರಿಗೆ ಬಟ್ಟೆ ಒಗೆಯಲೆಂದು ನದಿಗೆ ಇಳಿದಿದ್ದರು.ಈಸಂದರ್ಭದಲ್ಲಿ ದಿಢೀರ್ ಬಂದ ಸಿಡಿಲು ಇವರನ್ನು ಅಪ್ಪಳಿಸಿದೆ.ಇದರ ತೀವ್ರತೆಗೆ ಹನಮಕ್ಕ ಹಾಗೂ ಜಯಮ್ಮ ಸ್ಥಳದಲ್ಲೇ ಮ್ರತಪಟ್ಟಿದ್ದಾರೆಂದು ತಿಳಿದು ಬಂದಿದೆ.ಇಬ್ಬರು ಗಾಯಗೊಂಡಿದ್ದು ಈ ಪೈಕಿ ಮಗು ದಾರಿ ಮಧ್ಯೆ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಸಾವನ್ನಪ್ಪಿದೆ.ಸುದ್ದಿತಿಳಿದ ಬಂಟ್ವಾಳ ನಗರ ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿದ್ದಾರೆ.



