ಬಂಟ್ವಾಳ: ಇಲ್ಲಿನ ತಾಲೂಕು ಕುಲಾಲ ಸುಧಾರಕ ಸಂಘದ ಅಧ್ಯಕ್ಷರಾಗಿ ಬಿ. ಸತೀಶ್ ಕುಲಾಲ್ ಪುರಾಯ್ಕೆಯಾಗಿದ್ದಾರೆ. ಇತ್ತೀಚೆಗೆ ಬಿ.ಸಿರೋಡು ಪೊಸಳ್ಳಿಯ ಸಂಘದ ಸಭಾಭವನದಲ್ಲಿ ನಡೆದ 37ನೇ ವಾರ್ಷಿಕ ಮಹಾಸಭೆಯಲ್ಲಿ ಈ ಆಯ್ಕೆ ನಡೆದಿದೆ.

BTW_APL11_1 SATHISH KULAL
ಉಪಾಧ್ಯಕ್ಷರಾಗಿ ಡಿ.ಎಂ.ಕುಲಾಲ್, ಪ್ರಧಾನ ಕಾರ್ಯದರ್ಶಿಯಾಗಿ ಹರಿಪ್ರಸಾದ್, ಕೋಶಾಧಿಕಾರಿಯಾಗಿ ಜಲಜಾಕ್ಷಿ, ಚೆನ್ನಪ್ಪ ಬಂಗೇರ, ಜತೆ ಕಾರ್ಯದರ್ಶಿಯಾಗಿ ಯೋಗೀಶ್ ಬಂಗೇರ ಮತ್ತು ಯಾದವ ಅಗ್ರಬೈಲು, ಸಂಘಟನಾ ಕಾರ್ಯದರ್ಶಿಯಾಗಿ ಮಾಧವ ಕುಲಾಲ್, ಕ್ರೀಡಾ ಕಾರ್ಯದರ್ಶಿಯಾಗಿ ಸುಕುಮಾರ ಬಂಟ್ವಾಳ, ಸಾಂಸ್ಕøತಿಕ ಕಾರ್ಯದರ್ಶಿಯಾಗಿ ದಾಮೋದರ ಮಾಸ್ತರ್ ಏರ್ಯ ಮತ್ತು ಬಿ.ಲಿಂಗಪ್ಪ ಮಾಸ್ತರ್ ಪೊಸಳ್ಳಿ ಮಹಿಳಾ ಘಟಕದ ಅಧ್ಯಕ್ಷೆಯಾಗಿ ಜಯಂತಿ ಟೀಚರ್, ಸೇವಾದಳದ ದಳಪತಿಯಾಗಿ ಸದಾನಂದ ಬಂಗೇರ ಇವರುಗಳನ್ನು ಆಯ್ಕೆಮಾಡಲಾಯಿತು. ಮನೋಹರ ನೇರಂಬೋಳು, ಗಣೇಶ್ ಮರ್ದೋಳಿ, ಪ್ರೇಮ ಪೊಸಳ್ಳಿ, ರಮೇಶ್ ಸಾಲ್ಯಾನ್, ಮಚ್ಚೇಂದ್ರ ಸಾಲ್ಯಾನ್, ಯಶೋಧ ಕೃಷ್ಣಪ್ಪ. ಎ.ಲಿಂಗಪ್ಪ ಕೈಕುಂಜೆ, ಸುಂದರ್ ಬಿ., ಎ. ಪದ್ಮನಾಭ, ರಾಧಕೃಷ್ಣ, ಕೇಶವ ಬಂಗೇರ, ಸತೀಶ್ ಸಂಪಾಜೆ, ನಾರಯಣ ಸಿ. ಪೆರ್ನೆ ಇವರು ಕಾರ್ಯಕಾರಿ ಸಮಿತಿಗೆ ಆಯ್ಕೆಯಾದರು.
ಮನೋಹರ ನೇರಂಬೋಳು ಸ್ವಾಗತಿಸಿ, ಸುಕುಮಾರ್ ವಂದಿಸಿದರು, ಯೋಗೀಶ್ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *