ಬಂಟ್ವಾಳ: ಗುಡ್ಡೆಮನೆ ಬಂಗೇರ ಕುಟುಂಬಸ್ಥರ ದೈವ – ದೇವರ ಸಾನ್ನಿಧ್ಯದ ಬಂಟ್ವಾಳ ತಾಲೂಕಿನ ಶಂಭೂರು ಎಂಬಲ್ಲಿ ಅಷ್ಟಪವಿತ್ರ ನಾಗಬ್ರಹ್ಮಮಂಡಲೋತ್ಸವ ಏ.17ರಿಂದ 19ವರೆಗೆ ನಡೆಯಲಿದೆ.
ನಾಗಮಂಡಲೋತ್ಸವ ಸಮಿತಿ ಕಾರ್ಯಾಧ್ಯಕ್ಷ ಪ್ರಕಾಶ ಕಾರಂತ ನರಿಕೊಂಬು ಬುಧವಾರ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದರು.
ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಆಶೀರ್ವಾದದೊಂದಿಗೆ 19ರಂದು ಶಂಭೂರು ಗುಡ್ಡೆಮನೆಗುತ್ತು ನಾಗಬನದಲ್ಲಿ ನಡೆಯುವ ಈ ಕಾರ್ಯಕ್ರಮಕ್ಕೆ ಮಾಣಿಲ ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಸಂಪೂರ್ಣ ಮಾರ್ಗದರ್ಶನ ನೀಡಿದ್ದಾರೆ. ದೈವಜ್ಞ ಮಂಜುನಾಥ ಭಟ್ ಅಂತರ ನೇತೃತ್ವದಲ್ಲಿ ಗಣೇಶ ತಂತ್ರಿ ಎಡಪದವು ಪೌರೋಹಿತ್ಯವಿದ್ದು, ನಾಗಪಾತ್ರಿ ರಮಾನಂದ ಸಾಮಗ ಬೆಳ್ಳಿಪ್ರ್ಪಾಡಿ ಅವರಿಂದ ಮುದ್ದೂರು ಕೃಷ್ಣಪ್ರಸಾದ ವೈದ್ಯ, ನಾಗಕನ್ನಿಕೆಯಾಗಿ ಬಾಲಕೃಷ್ಣ ವೈದ್ಯ ಮತ್ತು ನಟರಾಜ ವೈದ್ಯ ಸಹಭಾಗಿತ್ವದಲ್ಲಿ ನಾಗಮಂಡಲೋತ್ಸವ ನಡೆಯಲಿದೆ ಎಂದರು.
*17ರಂದು ಹೊರೆಕಾಣಿಕೆ
ಸೋಮವಾರ 17ರಂದು ಅಪರಾಹ್ನ 2 ಗಂಟೆಗೆ ಬಿ.ಸಿ.ರೋಡ್ ಬ್ರಹ್ಮಶ್ರೀ ನಾರಾಯಣಗುರು ವೃತ್ತದಿಂದ ನಾಗಬ್ರಹ್ಮಮಂಡಲೋತ್ಸವ ಸಾನ್ನಿಧ್ಯಕ್ಕೆ ಹಸಿರುವಾಣಿ ಹೊರೆಕಾಣಿಕೆ ಶೋಭಾಯಾತ್ರೆ ನಡೆಯಲಿದೆ ಎಂದು ಈ ಸಂದರ್ಭ ಮಾಹಿತಿ ನೀಡಿದರು.
17, 18 ಮತ್ತು 19ರಂದು ವಿವಿಧ ದಾರ್ಮಿಕ ವಿಧಿವಿಧಾನಗಳು ನಡೆಯಲಿವೆ. 19ರಂದು ಸಂಜೆ ಧಾರ್ಮಿಕ ಸಭೆ ನಡೆಯಲಿದ್ದು, ಮಾಣಿಲ ಶ್ರೀ ಮೋಹನದಾಸ ಸ್ವಾಮೀಜಿ ಸಾನಿಧ್ಯ ವಹಿಸುವರು. ಅರಣ್ಯ ಸಚಿವ ಬಿ.ರಮಾನಾಥ ರೈ ಅಧ್ಯಕ್ಷತೆ ವಹಿಸುವರು. ಗಣೇಶ ಅಮೀನ ಸಂಕಮಾರ್ ಧಾರ್ಮಿಕ ಉಪನ್ಯಾಸ ನೀಡುವರು. ಸಂಸದ ನಳಿನ್ ಕಉಮಾರ್ ಕಟೀಲ್, ಸಚಿವ ಯು.ಟಿ.ಖಾದರ್, ಮಾಜಿ ಸಚಿವ ನಾಗರಾಜ ಶೆಟ್ಟಿ, ಅಭಯಚಂದ್ರ ಜೈನ್, ಅಳದಂಗಡಿ ಅರಸ ಡಾ.ಪದ್ಮಪ್ರಸಾದ ಅಜಿಲ, ಬಾಳ್ತಿಲಬೀಡು ಪೃಥ್ವೀರಾಜ ಬಂಗ, ಗೋಳಿದಡಿಗುತ್ತು ಗುರಿಕಾರ ವರ್ಧಮಾನ ದುರ್ಗಾಪ್ರಸಾದ ಶೆಟ್ಟಿ, ಪ್ರಗತಿಪರ ಕೃಷಿಕ ರಾಜೇಶ್ ನಾಯಕ್ ಉಳಿಪ್ಪಾಡಿಗುತ್ತು ಸಹಿತ ವಿವಿಧ ಗಣ್ಯರರು ಭಾಗವಹಿಸುವರು
ಈ ಸಂದರ್ಭ ಸಮಿತಿ ಅಧ್ಯಕ್ಷ ಮಾಧವ ಬಂಗೇರ ಗುಡ್ಡೆಮನೆಗುತ್ತು ಮಾತನಾಡಿ, ಇದೊಂದು ಕುಟುಂಬದವರ ಕಾರ್ಯಕ್ರಮವಾದರೂ ಊರವರೆಲ್ಲ ಸಂಪೂರ್ಣ ಸಹಕಾರ ನೀಡಿ ಸಮರ್ಪಣಾ ಭಾವದಿಂದ ತೊಡಗಿಸಿಕೊಂಡಿದ್ದಾರೆ ಎಂದು ಹೇಳಿದರು.
ಸಮಿತಿ ಉಪಾಧ್ಯಕ್ಷ ಆನಂದ ಸಾಲಿಯಾನ್, ಯಶೋಧರ ಕರ್ಬೆಟ್ಟು, ಹೊರೆ ಕಾಣಿಕೆ ಸಮಿತಿಯ ಪುರುಷೋತ್ತಮ ಸಾಲಿಯಾನ್, ಜೊತೆ ಕಾರ್ಯದರ್ಶಿ ಯಶೋಧರ ಬಂಗೇರ ಕೊಲ್ಲೂರು, ಹಿರಿಯರಾದ ಯಾದವ ಬಂಗೇರ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.