ಬಂಟ್ವಾಳ:ಗುಂಡ್ಲುಪೇಟೆ ಮತ್ತು ನಂಜನಗೂಡಿನ ಉಪಚುನಾವಣೆಯ ಗೆಲುವು ಮುಂದಿನ ಸಾರ್ವತ್ರಿಕ ಚುನಸವಣೆಯ ಫಲಿತಾಂಶಕ್ಕೆ ದಿಕ್ಸೂಚಿಯಾಗಲಿದೆ ಎಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅಭಿಪ್ರಾಯ ಪಟ್ಟಿದ್ದಾರೆ.
ಬಿ.ಸಿ.ರೋಡಿನಲ್ಲಿ ಗುರುವಾರ ಮಧ್ಯಾಹ್ನ ಪಾಣೆಮಂಗಳೂರು,ಬಂಟ್ವಾಳ ಬ್ಲಾಕ್ ಕಾಂಗ್ರೇಸ್ ವತಿಯಿಂದ ನಡೆದ ವಿಜಯೋತ್ಸವದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಕಾಂಗ್ರೇಸ್ ಮಾತ್ರಬಡವರ ನಾಡಿ ಮಿಡಿತ ಅರಿತಿರುವ ಪಕ್ಷವಾಗಿದೆ.ಮುಂದಿನ ದಿನದಲ್ಲಿ ಕಾಂಗ್ರೇಸ್ ಮುಕ್ತವಾಗಿಸುವ ಬಿಜೆಪಿ ಕನಸು ನುಚ್ಚುನೂರಾಗಲಿದೆ ಎಂದರು ಕಾಂಗ್ರಸ್ ಪಕ್ಷ ಕೊಟ್ಟಿರುವ ಭರವಸೆಯನ್ನು ಈಡೇರಿಸುತ್ತಿದೆಯೆಂಬುದನ್ನು ಜನರು ಅರಿತಿದ್ದಾರೆ.ಬಿಜೆಪಿ ಮುಂದಿನ ಚುನಾವಣೆಯಲ್ಲಿ ನೆಲ ಕಚ್ಚಲಿದೆ ಎಂದ ಅವರು ಭವಿಷ್ಯ ನುಡಿದರು. ಗೇರು ನಿಗಮದ ಅಧ್ಯಕ್ಷ ಬಿ.ಎಚ್.ಖಾದರ್,ಬ್ಲಾಕ್ ಅಧ್ಯಕ್ಷರುಗಳಾದ ಮಾಯಿಲಪ್ಪ ಸಾಲಿಯಾನ್,ಅಬ್ಬಾಸ್ ಅಲಿ,ಜಿಪಂ.ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ,,ಪಿಯೂಸ್ ರೊಡ್ರಿಗಸ್,ಪ್ರಶಾಂತ್ ಕುಲಾಲ್,ಲುಕ್