ಬಂಟ್ವಾಳ: ವಿದ್ಯಾರ್ಥಿಗಳು ವಿದ್ಯಾರ್ಥಿ ದೆಶೆಯಲ್ಲಿ ಕಠಿಣ ಪರಿಶ್ರಮದ ಮೂಲಕ, ಇಚ್ಚಾಶಕ್ತಿಯನ್ನು ಮೈಗೂಡಿಕೊಂಡು ಸ್ಪಷ್ವವಾದ ಗುರಿಯನ್ನು ನಿರ್ದರಿಸಿಕೊಂಡು ಪ್ರಮಾಣಿಕವಾಗಿ ಶಿಸ್ತಿನ ಸಿಪಾಯಿಗಳಾಗಿ ಬದುಕು ಸಾಗಿಸಿ, ಅ ಮೂಲಕ ಸಮಾಜಕ್ಕೆ ಗುರುಗಳಿಗೆ ಹೆತ್ತವರಿಗೆ ಗೌರವ ನೀಡಿ ಎಂದು ತಾ.ಪಂ.ಅಧ್ಯಕ್ಷ ಚಂದ್ರಹಾಸ ಕರ್ಕೇರ ಹೇಳಿದರು. ಅವರು ರಾಜ್ಯ ಬಾಲಭವನ ಸೊಸೈಟಿ , ಬೆಂಗಳೂರು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಕೆ ದ.ಕ. ಶಿಶು ಅಭಿವೃದ್ದಿ ಯೋಜನೆ ಬಂಟ್ವಾಳ ಇವೆ ಸಂಯುಕ್ತ ಆಶ್ರಯದಲ್ಲಿ ಬಿಸಿರೋಡಿನ ಸ್ರ್ತಿಶಕ್ತಿ ಭವನದಲ್ಲಿ 10 ದಿನಗಳ ಕಾಳ ನಡೆಯುವ ಬೇಸಿಗೆ ಶಿಬಿರದ ಉದ್ಟಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮಕ್ಕಳಲ್ಲಿರುವ ಅನೇಕ ಪ್ರತಿಭೆಗಳನ್ನು ಅನಾವರಣಗೊಳಿಸಲು ಇಂತಹ ಕಾರ್ಯಕ್ರಮಗಳು ಪ್ರಯೋಜನಕಾರಿಯಾಗುತ್ತದೆ. ಇಂತಹ ಉತ್ತಮ ಕಾರ್ಯಕ್ರಮಗಳಲ್ಲಿ ಮಕ್ಕಳು ಭಾಗವಹಿಸಿದಾಗ ಜೀವನ ಮೌಲ್ಯಗಳನ್ನು ಪಡೆಯಲು ಸಹಕಾರಿಯಾಗುತ್ತದೆ ಎಂದರು.
ಕಾರ್ಯಕ್ರಮವನ್ನು ಉದ್ಟಾಟಿಸಿ ಮಾತನಾಡಿದ ತಾ.ಪಂ.ಉಪಾಧ್ಯಕ್ಷ ಅಬ್ಬಾಸ್ ಆಲಿ ಅತ್ಯಂತ ಸರಳತೆಯ ಪ್ರಮಾಣಿಕತೆಯ ಮತ್ತು ನಿಷ್ಠೆಯ ಜೀವನವನ್ನು ಕಲಿಯಿರಿ ಮತ್ತು ಮಾನವೀಯತೆಯ ಮೂಲಕ ಸ್ವಂತಿಕೆಯನ್ನು ಬೆಳೆಸಿಕೊಳ್ಳಿ ಎಂದು ಹೇಳಿದರು.
ವೇದಿಕೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷೆ ಧನಲಕ್ಮೀ ಸಿ ಬಂಗೇರ, ತಾ.ಪಂ.ಕಾರ್ಯನಿರ್ವಾಹಣಾ ಅಧಿಕಾರಿ ಸಿಪ್ರಿಂಯಾನ್ ಮಿರಾಂದ, ರೋಟರಿ ಕ್ಲಬ್ ಅಧ್ಯಕ್ಷ ಸಂಜೀವ ಪೂಜಾರಿ, ರೋಟರಿ ಕಾರ್ಯದರ್ಶಿ ನಾರಾಯಣ ಹೆಗ್ಡೆ, ರೋಟರಿ ಕಮ್ಯೂನಿಟಿ ವಿಭಾಗದ ಅಧ್ಯಕ್ಷ ಸುದರ್ಶನ ಭಾಳಿಗಾ ಉಪಸ್ಥಿತರಿದ್ದರು. ಬಂಟ್ವಾಳ ಶಿಶು ಅಭಿವೃದ್ದಿ ಯೋಜನಾಧಿಕಾರಿ ಮಲ್ಲಿಕಾ ಸ್ವಾಗತಿಸಿ, ಹಿರಿಯ ಮೇಲ್ವಿಚಾರಕಿ ಉಷಾ ವಂದಿಸಿದರು, ಹಿರಿಯ ಮೇಲ್ವಿಚಾರಕಿ ಗಾಯತ್ರಿ ಕಂಬಳಿ ಪ್ರಸ್ತಾವಿಸಿ ಕಾರ್ಯಕ್ರಮ ನಿರೂಪಿಸಿದರು.