ಕುಪ್ಪೆಪದವು: ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಲಿ. ಮತ್ತು ಆರ್‍ಬಿಐ ನಿರ್ದೇಶನದನ್ವಯ ಜನರಿಗೆ ಆರ್ಥಿಕ ವ್ಯವಹಾರಗಳ ಸವಲತ್ತುಗಳ ಹಾಗೂ ಹೊಸ ತಂತ್ರಜ್ಙಾನದ ಬಗ್ಗೆ ಅರಿವು ಮೂಡಿಸುವ ಬಗ್ಗೆ ನಡೆದ ಆರ್ಥಿಕ ಸಾಕ್ಷರತಾಕಾರ್ಯಗಾರ ವು ಜೂ.9ರಂದು ಕುಪ್ಪೆಪದವು ದ.ಕ ಜಿಲ್ಲೆ ಕೇ0ದ್ರ ಸಹಕಾರಿ ಬ್ಯಾ0ಕ್ ನಲ್ಲಿ ಜರುಗಿತು.
ಸಂಪನ್ಮೂಲವ್ಯಕ್ತಿಯಾಗಿ ಸಿ.ಎ. ಉಮೇಶ್ ರಾವ್ ಮೂಡಬಿದ್ರೆ ಅರಿವು ಮೂಡಿಸಿದರು.ಬ್ಯಾಂಕಿನ ಸವಲತ್ತುಗಳ ಬಗ್ಗೆ ಶಾಖಾವ್ಯವಸ್ಥಾಪಕರಾದ ಶಂಕರ ಮಾಹಿತಿ ನೀಡಿದರು. ವಿಠಲ ಶೆಟ್ಟಿ,ಬ್ಯಾಂಕಿನ ಸಿಬ್ಬಂದಿಗಳಾದ ರೂಪಲತಾ, ಸಂಧ್ಯಾ, ಹಾಗೂ ರಕ್ಷಿತ್ ಸಹಕರಿಸಿದರು.