ಬಡಗಬೆಳ್ಳೂರು: ಭೂಮಿಯಲ್ಲಿ ಅಂತರ್ಜಲ ಮಟ್ಟ ಹೆಚ್ಚಾದರೆ ಮಾತ್ರ ನೀರಿನ ಸಮಸ್ಯ ಕಡಿಮೆಯಾಗಬಹುದು ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ ಅಭಿಪ್ರಾಯಪಟ್ಟರು.ಅವರು ಬಡಗಬೆಳ್ಳೂರಿನಲ್ಲಿ ಯುನೈಟೆಡ್ ಬ್ರೀವರೀಸ್ ಲಿ. ವತಿಯಿಂದ ಸಮರ್ಪಿಸಲ್ಪಟ್ಟ ನಾಲೆಯನ್ನು ಸೋಮವಾರ ಉದ್ಘಾಟಿಸಿ ಮಾತ ನಾಡಿದರು. ಜಗತ್ತಿನಲ್ಲಿ ನೀರಿಗಾಗಿ ಹಾಹಾಕಾರ ಎದ್ದೇಳುವ ದಿನಗಳು ದೂರವಿಲ್ಲ ಆದ್ದರಿಂದ ಅಂತರ್ಜಲ ಸಂರಕ್ಷಣೆ ನಮ್ಮೆಲ್ಲರ ಹೊಣೆ ಈ ನಿಟ್ಟಿನಲ್ಲಿ ಯುನೈಟೆಡ್ ಬ್ರೀವರೀಸ್ ಕಾರ್ಯ ಶ್ಲಾಘನೀಯ ಎಂದು ಹೇಳಿದರು.12 vp badagabellor

12 vp badagabelloor1

ಯುನೈಟೆಡ್ ಬ್ರೀವರೀಸ್ ವ್ಯವಸ್ಥಾಪಕ ಶೇಖರ್ ರಾಮಮೂರ್ತಿ ಮಾತಾಡಿ ನಾಲೆ ನಿರ್ಮಾಣದಲ್ಲಿ ಸ್ಥಳೀಯರ ಸಹಕಾರ ಅಮೂಲ್ಯವಾದುದು ಮತ್ತು ಊರಿನಲ್ಲಿ ಅಂತರ್ಜಲ ಮಟ್ಟ ಹೆಚ್ಚಿ ಕೃಷಿ ಚಟುವಟಿಕೆಗಳಿಗೆ ಪೂರಕವಾಗಲಿದೆ ಎಂದರು.ಮಾಲಿನ್ಯ ನಿಯತ್ರಣಾಧಿಕಾರಿ ಜಯಪ್ರಕಾಶ್ ಮಾತನಾಡಿ ನಾಲೆಯ ಅಗತ್ಯತೆಗಳೊಂದಿಗೆ ನೀರಿನ ಸಮರ್ಪಕ ಬಳಕೆಯ ಕುರಿತು ತಿಳಿಸಿದರು.
*ಇಬ್ಬರಿಗೆ ಸನ್ಮಾನ:

12 vp shekar rammoorthi

12 vp gopinath

12-3

12-1

12-2ಈ ಸಂದರ್ಭದಲ್ಲಿ ಗ್ರಾಮದ ವತಿಯಿಂದ ಯುನೈಟೆಡ್ ಬ್ರೀವರೀಸ್ ವ್ಯವಸ್ಥಾಪಕ ಶೇಖರ್ ರಾಮಮೂರ್ತಿ ಮತ್ತು ಗೌರಿಶಂಕರ್ ಇವರನ್ನು ಸನ್ಮಾನಿಸಲಾಯಿತು. ಈಸಂದರ್ಭದಲ್ಲಿ ತಾ.ಪಂ ಸದಸ್ಯ ಯಶವಂತ ಪೂಜಾರಿ, ಬಡಗಬೇಳ್ಳೂರು ಗ್ರಾ. ಪಂ ಅಧ್ಯಕ್ಷೆ ಜಯಂತಿ,ಗ್ರಾ.ಪಂ.ಸದಸ್ಯ ವಸಂತ , ವೃತ್ತಿ ಪೌಂಡೇಶನ್‍ನ ಪ್ರೀತಂ ರೋಡ್ರಿಗಸ್, ಯುನೈಟೆಡ್ ಬ್ರೀವರೀಸ್ ತುಷಾರಾ, ಬಾಲಾಜಿ ಎ . ಗೌರಿಶಂಕರ್, ಕಿರಣ್ ನಾಮ್‍ದೇವ್ ನೇಮ್‍ಡೆ ಜಲ ಸಂರಕ್ಷಣಾ ಸಮಿತಿ ಅಧ್ಯಕ್ಷ ಕಿಶೋರ್ ಭಂಡಾರಿ ಉಪಸ್ಥಿತರಿದ್ದರು. ಬಡಗಬೆಳ್ಳೂರು ಗ್ರಾ.ಪಂ. ಅಧ್ಯಕ್ಷ ಹಾಗೂ ಅಭಿವೃದ್ಧಿ ಅಧಿಕಾರಿ ಅವರಿಗೆ ಯುನೈಟೆಡ್ ಬ್ರೀವರೀಸ್ ಅವರು ಕೀ ಹಸ್ತಾಂತರಿಸಿದರು. ರಮೇಶ್ ಚಂದ್ರ  ಭಂಡಾರಿ ಸ್ವಾಗತಿಸಿ ಅಶೋಕ್ ವಿಟ್ಲ ನಿರೂಪಿಸಿ ವಸಂತ ಅಂಚನ್ ವಂದಿಸಿದರು.

By suddi9

Leave a Reply

Your email address will not be published. Required fields are marked *