ಪೊಳಲಿ:ಸ್ವಾಮಿ ವಿವೇಕನಂದರು ದೇಶ ಕಂಡ ಅಪ್ರತಿಮ ದೇಶ ಭಕ್ತ ಸಂತ ಅವರ ಆದರ್ಶಗಳಿಂದ ಮಾತ್ರ ನವಭಾರತ ನಿರ್ಮಾಣ ಸಾಧ್ಯ ಎಂದು ರಾಮಕೃಷ್ಣ ಮಿಷನ್ ಉಪಾಧ್ಯಕ್ಷರೂ. ಚೆನ್ನೈ ರಾಮಕೃಷ್ಣ ಆಶ್ರಮದ ಮುಖ್ಯಸ್ಥರಾದ ಪ.ಪೂ.ಸ್ವಾಮಿ ಗೌತಮಾನಂದಾಜಿ ಮಹರಾಜ್ ಹೇಳಿದರು. ಆವರು ಪೊಳಲಿ ರಾಮಕೃಷ್ಣ ತಪೋವನದಲ್ಲಿ ಸೋಮವಾರ ಭಕ್ತರಿಗೆ ಹಿತವಚನದಲ್ಲಿ ಇಂದಿನ ವಿದ್ಯಾರ್ಥಿಗಳು ಭವಿಷ್ಯದ ಭಾರತದ ಪ್ರಜೆಗಳಾಗಬೇಕೆಂದು ತಿಳಿಸಿದರು.aram 02

asrama 1

asram 03

asrama 3

asrama 2ಪ.ಪೂ. ಸ್ವಾಮೀಜಿಗಳು ಸುಮಾರು ಎರಡು ಗಂಟೆಗಳ ಕಾಲ ಆಶ್ರಮದಲ್ಲಿದ್ದು ,ವಿರ್ಶವಭಾವೈಕ್ಯ ಮಂದಿರದಲ್ಲಿ ಪೂಜೆ ಸಲ್ಲಿಸಿ ,ಭಕ್ತರಿಗೆ ಆಶೀರ್ವಾದನೀಡಿ ಆಶ್ರಮದ ಪ್ರಗತಿಯ ಬಗ್ಗೆ ಚರ್ಚಿಸಿದರು. ಪೂಜ್ಯರೊಂದಿಗೆ ಮಂಗಳೂರು ರಾಮಕೃಷ್ಣ ಆಶ್ರಮದ ಮುಖ್ಯಸ್ಥರಾದ ಶ್ರೀ ಜಿತಕಾಮಾನಂದಾಜಿ ಮಹರಾಜ್ ಹಾಗೂ ಚೆನ್ನೈ ರಾಮಕೃಷ್ಣ ಆಶ್ರಮದ ಕಿರಿಯ ಸ್ವಾಮೀಜಿಗಳು ಜೊತೆಯಲ್ಲಿದ್ದರು. ರಾಮಕೃಷ್ಣ ತಪೋವನದ ಮುಖ್ಯಸ್ಥರಾದ ಶ್ರೀ ವಿವೇಕಚೈತನ್ಯಾನಂದ ಸ್ವಾಮೀಜಿ, ಸ್ವಾಮಿ ಶಾಂತರೂಪಾನಂದಾಜಿ,ಸ್ವಾಮಿ ಪದ್ಮಪಾದನಂದ ಇದ್ದರು.

By suddi9

Leave a Reply

Your email address will not be published. Required fields are marked *