ಎಡಪದವು: ಎಡಪದವು ಬಾಕಿಯಾರ್ ನಿವಾಸಿ ಲಿಂಗಪ್ಪ ಗೌಡ ಇವರ ಮನೆಯ ಕೊಟ್ಟಿಗೆಯಲ್ಲಿ ಇದ್ದ 5 ಜಾನುವಾರುಗಳನ್ನು ಕಳ್ಳರು ಹೊತ್ತೊಯ್ದಿದ್ದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಮನೆಯವರು ತಿಳಿಸುವಂತೆ ರಾತ್ರಿ ಮಲಗಿದ ಬಳಿಕ ನುಗ್ಗಿದ ಕಳ್ಳರು ಕೊಟ್ಟಿಗೆಯಲ್ಲಿದ್ದ 5 ಹಸುಗಳನ್ನು ಕಳ್ಳತನ ಮಾಡಿದ್ದಾರೆ ಸುಮಾರು ರಾತ್ರಿ 1 ಘಂಟೆಗೆ ಕಳ್ಳರು ನುಗ್ಗಿರಬಹುದು ಎಂದು ಶಂಕಿಸಲಾಗಿದೆ.
ಸ್ಥಳಕ್ಕೆ ಭೇಟಿ ನೀಡಿದ ವಿಶ್ವ ಹಿಂದೂ ಪರಿಷತ್ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷ ಜಗದೀಶ್ ಶೇಣವ ಬಜರಂಗದಳ ದಕ್ಷಿಣ ಪ್ರಾಂತ ಸಂಚಾಲಕ ಶರಣ್ ಪಂಪ್ವೆಲ್, ನವೀನ್ ಮೂಡುಶೆಡ್ಡೆ ,ಮುರಳೀಧರ ಶೆಟ್ಟಿ ಎಡಪದವು ಅವರು ಆರೊಪಿಗಳನ್ನು ಬಂಧಿಸಲು ಮೂರು ದಿನಗಳ ಗಡುವು ನೀಡಿ ತಪ್ಪಿದ್ದಲ್ಲಿ ಉಗ್ರ ಹೋರಾಟದ ಎಚ್ಚರಿಕೆ ನೀಡಿದ್ದಾರೆ. ಲಿಂಗಪ್ಪ ಗೌಡ ಅವರಿಗೆ ರೂಪಾಯಿ 20,000 ಪರಿಹಾರ ಧನ ವಿತರಿಸಿ ದೈರ್ಯ ತುಂಬಿದರು. ಬಜಪೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.