ವಿಟ್ಲ: ವಿಠಲ ಪದವಿ ಪೂರ್ವ ಕಾಲೇಜಿನ ಹಿರಿಯ ವಿದ್ಯಾರ್ಥಿ ಮೈಸೂರು ಎಸ್ ಎಲ್ ವಿ ಎಂಟರ್‍ಪ್ರೈಸಸ್ ನ ಮಾಲಕ ದಿವಾಕರ ದಾಸ್ ಕಂಬಳಬೆಟ್ಟು ಇವರು ವಿಠಲ ಪ್ರೌಢ ಶಾಲೆಯ 50 ಬಡ ವಿದ್ಯಾರ್ಥಿಗಳಿಗೆ ಸುಮಾರು 30 ಸಾವಿರ ವೆಚ್ಚದ ಬರೆಯುವ ಪುಸ್ತಕಗಳನ್ನು ಉಚಿತವಾಗಿ ನೀಡಿರುತ್ತಾರೆ.SHV_6521

ಈ ಪುಸ್ತಕಗಳ ವಿತರಣಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ವಿಠಲ ವಿದ್ಯಾ ಸಂಘದ ಅಧ್ಯಕ್ಷ ಮುಗುಳಿ ತಿರುಮಲೇಶ್ವರ ಭಟ್ ಪುಸ್ತಕಗಳನ್ನು ವಿತರಿಸಿದರು. ಈ ಕಾರ್ಯಕ್ರಮದಲ್ಲಿ ನಿವೃತ್ತ ಅಧ್ಯಾಪಕ ಪದ್ಮಯ್ಯ ಗೌಡ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ವಿಟ್ಲದ ಅಪ್ಪಾಜಿ ರಾವ್ ಕುಟುಂಬ ಹಾಗೂ ಎಂ ಆರ್ ಹೊಳ್ಳ ಹಾರ್ಡ್‍ವೇರ್ ಮಾಲಕ ಎಂ ಆರ್ ಹೊಳ್ಳ ರವರು ವಿದ್ಯಾರ್ಥಿಗಳಿಗೆ ನೀಡಿದ ಸಮವಸ್ತ್ರಗಳನ್ನು ವಿತರಿಸಲಾಯಿತು.

ಹಿರಿಯ ಶಿಕ್ಷಕ ಸಿ ಹೆಚ್ ಸುಬ್ರಹ್ಮಣ್ಯ ಭಟ್, ಶಿಕ್ಷಕಿ ಚಂದ್ರಕಲಾ ರಾವ್, ಮಕ್ಕಳು, ಪೋಷಕರು ಮತ್ತು ಶಿಕ್ಷಕರು ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕ ಕಿರಣ್ ಕುಮಾರ್ ಬ್ರಹ್ಮಾವರ್ ಸ್ವಾಗತಿಸಿದರು. ಶಿಕ್ಷಕ ಶಂಕರನಾರಾಯಣ ಪ್ರಸಾದ್ ಪ್ರಸ್ತಾವಿಸಿದರು. ಶಿಕ್ಷಕ ಮಹಬಲೇಶ್ವರ ಭಟ್ ವಂದಿಸಿದರು. ಶಿಕ್ಷಕ ರಮೇಶ್ ಬಿ ಕೆ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ಮೋಹನ್ ಸಹಕರಿಸಿದರು.

By suddi9

Leave a Reply

Your email address will not be published. Required fields are marked *