ಪೊಳಲಿ ; ಬಡಕಬೈಲು ವ್ಯಾಪ್ತಿಯ ಹಲವಾರು ಕಡೆ ಬಿಎಸ್ಸೆನ್ನೆಲ್ ಸಂಪರ್ಕ ಸರಿಯಾಗಿ ದೊರೆಯುತ್ತಿಲ್ಲದ ಕಾರಣ ಗ್ರಾಹಕರು ಸಂಸ್ಥೆಗೆ ಹಿಡಿಶಾಪ ಹಾಕುವಂತಾಗಿದೆ.ಮಳೆಯ ಸಂದರ್ಭದಲ್ಲಿ ಬಿಎಸ್ಸೆನ್ನೆಲ್ ಸ್ಥಿರ ದೂರವಾಣಿಯ ಸಂಪರ್ಕವೂ ಕಡಿತಗೊಳ್ಳುತ್ತಿದ್ದು ಈ ಆಸುಪಾಸಿನ ಜನತೆಗೆ ಅಸಮಾಧಾನವನ್ನುಂಟುಮಾಡಿದೆ. ಇಂಟರ್ನೆಟ್ ಸೌಲಭ್ಯ ಪಡೆಯುತ್ತಿರುವ ಹಲವಾರು ಗ್ರಾಹಕರು ಬಿಎಸ್ಸೆನ್ನೆಲ್‍ಗೆ ಹಿಡಿಶಾಪ ಹಾಕುತ್ತಿದ್ದಾರೆ. ಇದರ ಜೊತೆಜೊತೆಯಲ್ಲೇ ಪೊಳಲಿಪರಿಸರದಲ್ಲೂ ಬಿಎಸ್ಸೆನ್ನೆಲ್ ಮೊಬೈಲ್ ಸಂಪರ್ಕವೂ ಮುರ್ನಾಲ್ಕು ದಿನದಿಂದ ಕಡಿತಗೊಂಡಿದ್ದು ಗ್ರಾಹಕರಿಗೆ ಕಿರಿಕಿರಿಯನ್ನುಂಟುಮಾಡಿದೆ. ಈ ಎರಡು ಪ್ರಕರಣಗಳ ಬಗೆಯೂ ಗ್ರಾಹಕರು ಹಲವಾರು ಬಾರಿ ಸಂಬಂಧಪಟ್ಟವರ ಬಳಿ ದೂರಿದ್ದರೂ ಪ್ರಯೋಜನವಾಗಿಲ್ಲ ಜೊತೆಗೆ ಮಂಗಳೂರಿನ ಕೇಂದ್ರ ಕಛೇರಿಗೂ ಫೋನ್ ಮೂಲಕ ದೂರು ದಾಖಲಿಸಿದ್ದರೂ ಅಧಿಕಾರಿಗಳು ನಿರ್ಲಕ್ಷ್ಯದ ಉತ್ತರ ನೀಡುತ್ತಿದ್ದಾರೆ. ಇನ್ನಾದರೂ ಇಲಾಖೆ ಜಾಗೃತವಾಗಿ ದುರಸ್ತಿ ಕಾರ್ಯ ಮಾಡಲಿ ಎಂಬುದು ಸ್ಥಳಿಯರ ವಾದ.