ಕಾಜಿಲ: ಮಂಗಳೂರಿನಿಂದ ಇತಿಹಾಸ ಪ್ರಸಿದ್ಧ ಪೊಳಲಿ ಶ್ರಿ ರಾಜರಾಜೇಶ್ವರಿ ದೇವಾಲಯಕ್ಕೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ 101 ಹಾದುಹೋಗುವ ಕಾಜಿಲ ಎಂಬಲ್ಲಿ ರಸ್ತೆ ಕುಸಿದೆ ಅಪಾಯಕ್ಕೆ ಆಹ್ವಾನ ನೀಡುತ್ತಿದೆ.IMG-20170715-WA0089
ಕಾಜಿಲ ಬಳಿಯ ತಿರುವಿನಲ್ಲಿ ಮಳೆ ನೀರಿನ ಹರಿವಿನ ಕಾರಣದಿಂದಾಗಿ ಕುಸಿತ ಸಂಭವಿಸಿದ್ದು ಅಪಘಾತದ ಭೀತಿ ನಿತ್ಯ ಪ್ರಯಾಣಿಕರನ್ನು ಕಾಡುತ್ತಿದೆ. ದಿನನಿತ್ಯ ಈ ರಸ್ತೆಯಲ್ಲಿ ನೂರಾರು ವಾಹನಗಳು ಓಡಾಡುತ್ತಿದ್ದು ತಿರುವಿನಲ್ಲಿ ಸಂಭವಿಸಿದ ಈ ಕುಸಿತದಿಂದಾಗಿ ಭಾರಿ ಅಪಾಯದ ಆಹ್ವಾನವಿದೆ ಎಂದು ವಾಹನ ಸವಾರರು ಮಾತನಾಡುತ್ತಿದ್ದಾರೆ.ಇಲ್ಲಿ ಕುಸಿತ ಸಂಭವಿಸಿದ್ದು ಇದೇ ಮೊದಲೇನಲ್ಲ ಕಳೆದ ಬಾರಿಯ ಮಳೆಗಾಲದ ಸಂದರ್ಭದಲ್ಲೂ ಇದೇ ಜಾಗದಲ್ಲಿ ರಸ್ತೆ ಕುಸಿತ ಸಂಭವಿಸಿದ್ದು, ಈ ಬಗ್ಗೆ ಸಂಬಂಧಪಟ್ಟವರಲ್ಲಿ ಮನವಿ ಸಲ್ಲಿಸಿದಾಗ ಕೇವಲ ಒಂದು ತಾತ್ಕಾಲಿಕ ತಡೆಗೋಡೆ ನಿರ್ಮಿಸಿ ಹೋಗಿದ್ದರು ಆದರೆ ದಿನನಿತ್ಯದ ವಾಹನ ಸಂಚಾರದಿಂದ ಆ ತಡೆಗೋಡೆ ಕುಸಿದು ಬಿದ್ದಿತ್ತು. ತದನಂತರ ಆಧಿಕಾರಿಗಳು ಇತ್ತ ಕಡೆ ತಲೆ ಎತ್ತಿಯೂ ನೊಡದಿರುವುದು ವಿಪರ್ಯಾಸವೇ ಸರಿ. ಇನ್ನಾದರೂ ಸಂಬಂಧಪಟ್ಟ ಇಲಾಖೆ ಎಚ್ಚರಗೊಂಡು ರಸ್ತೆ ದುರಸ್ತಿ ಕಾಮಾಗಾರಿ ಕೈಗೊಳ್ಳುವುದು ಉತ್ತಮ.

By suddi9

Leave a Reply

Your email address will not be published. Required fields are marked *