ಸುದ್ದಿ9 ಕೈಕಂಬ: ಆಂಗ್ಲ ಭಾಷೆಯ 26 ಅಕ್ಷರಗಳಲ್ಲಿ ಕನ್ನಡ ಲಿಪಿಯನ್ನು ಗಣಕಯಂತ್ರದಲ್ಲಿ ಮುದ್ರಣ ಮಾಡುವ ಸಲುವಾಗಿ ಅಕ್ಷರ ರಚಿಸುವ ಮಹಾನ್ ಜವಾಬ್ದಾರಿಯನ್ನು ವಹಿಸಿದ ನಾನು 20ರ ದಶಕದಲ್ಲಿ ಕನ್ನಡಕ್ಕಾಗಿಯೇ ಹೊಸ ಕೀಲಿಮನೆಯನ್ನು ಕಂಡುಹಿಡಿಯಲು ಸಾಧ್ಯವಾಯ್ತು. ಈ-ಡಿಜಿಟಲ್ ಪದ್ಧತಿಯಿಂದ ಕನ್ನಡವನ್ನು ಇನ್ನಷ್ಟು ಶ್ರೀಮಂತಗೊಳಿಸಲು ಸಾಧ್ಯವಾಯಿತು. ಆದರೂ ಕನ್ನಡ ಯೂನಿಕೋಡ್ನಂತೆ ಬಳಸಲು ಇನ್ನೂ ಸರಿಯಾದ ಕ್ರಮವನ್ನು ಕಂಡುಹಿಡಿಯಲಾಗಿಲ್ಲ ಎಂದು ನಾಡೋಜ ಪ್ರೊ.ಕೆ.ಪಿ. ರಾವ್(ಕಿನ್ನಿಕಂಬಳ ಪದ್ಮನಾಭ ರಾವ್) ಹೇಳಿದ್ದಾರೆ.

ಅವರು ಪೊಳಲಿಯಲ್ಲಿ ದ.ಕ. ಜಿಲ್ಲಾ ಸಾಹಿತ್ಯ ಪರಿಷತ್ ವತಿಯಿಂದ ಆ.2ರಂದು ನಡೆದ 19ನೇ ಜಲ್ಲಾ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷರ ನುಡಿಗಳನ್ನು ಅರುಹಿದರು.
ನನಗೆ ಯಾರೂ ಅಕ್ಷರ ಕಲಿಸಲಿಲ್ಲ. ನಾನು ಹುಟ್ಟಿ ಬೆಳೆದ ಊರು ವಿಶಿಷ್ಠ ಭಾಷಾ ಪರಂಪರೆಯ ಪ್ರದೇಶ. ನನ್ನ ತಂಗಿಯ ದೆಸೆಯಿಂದ ಅವಳ ಪುಣ್ಯಾಹಕ್ಕೆ ಬರುವ ಪುರೋಹಿತರು ಹಾಕುವ ಮಂಡಲಗಳನ್ನು ನೋಡಿ ಕನ್ನಡ ಬರೆಯಲು ಕಲಿತೆ. ಗುರುಕಂಬಳದ ಉದರ್ು ಶಾಲೆಯಲ್ಲಿ ನನಗೆ ಕನ್ನಡ ಕಲಿಸುವ ಜವಾಬ್ದಾರಿ ಸಿಕ್ಕಿತು. ಅಲ್ಲಿ ನನಗೆ ಭಾಝಿ ಮಹಮ್ಮದ್ ಹುಸೇನ್ ಎಂಬಾತ ಉದರ್ು ಕಲಿಸಿದ. ಈಗ ಉದರ್ು ಭಾಷೆಯ ಜೊತೆ ಅರಬಿ ಭಾಷೆಯನ್ನು ಕಲಿತೆ. ಉದರ್ು ನನಗೆ ಕನ್ನಡದಂತೆ ಸುಲಲಿತ ಭಾಷೆ. ಕೇಳುವ ಕಿವಿ, ನೋಡುವ ಣ್ಣು, ಮುಕ್ತ ಮನಸ್ಸು ಇವಿಷ್ಟೇ ಭಾಷಾ ಕಲಿಕೆಯ ಅಗತ್ಯವಾಗಿತ್ತು ಎಂದರು. ಕನ್ನಡ ಲಿಪಿ ಮುದ್ರಣದ ಬಗ್ಗೆ ಮಾತಾಡಿದ ಅವರು ಕನ್ನಡ ಲಿಪಿಯ ವಿಕಸಿತ ರೂಪ ಬಂದಿದ್ದು ಅತ್ತಾವರದ ಅನಂತಾಚಾರ್ಯರಿಂದ. ಅವರು ಕನ್ನಡ ಲಿಪಿಗೆ ಸೂಕ್ತ ಮಾಪರ್ಾಡುಗಳನ್ನು ಮಾಡಿಕೊಟ್ಟರು. ಬಳಿಕ ಬಾಸೆಲ್ ಮಿಶನ್ನವರು ಕನ್ನಡ ಒಂದೇ ಭಾಷೆಯಲ್ಲಿ ಕೊಡವ, ತುಳು ಭಾಷೆಯನ್ನು ಬರೆಯಲಾರಂಬಿಸಿದ್ದರಿಂದ ಕನ್ನಡ ಬೆಳೆಯಲಾರಂಭಿಸಿತು.
ಆಮೇಲೆ ಕೀಮಲಿಮನೆಯನ್ನು ರಚಿಸಿದಾದರೂ ಗಣಕಯಂತ್ರದ 26 ಅಕ್ಷರಗಳುಲ್ಲ ಕೀಲಿಮನೆಯಲ್ಲಿ ಕನ್ನಡದ ಸ್ವರಗಳು, ವ್ಯಂಜನಗಳನ್ನು ಸೇರಿಸುವುದೇ ಒಂದು ಸಮಸ್ಯೆಯಾಗಿತ್ತು. ಮಣಿಪಾಲಕ್ಕೆ ಬಂದು ಅದ್ಯಾಪನ ವೃತ್ತಿಗೆ ಸೇರಿದ ಮೇಲೆ ಕೀಲಿಮನೆ ವಿನ್ಯಾಸ ಮಾಡಿದೆ. ಈ ಮಾದರಿಯ ಕೀಲಿಮನೆಯನ್ನು ಯಾವ ಭಾಷೆಗೂ ಕೂಡಾ ಬಳಸಿಕೊಳ್ಳಬಹುದು. ಯೂನಿಕೋಡ್ನ ಪೂರ್ವ ರೂಪವನ್ನು ಸೃಷಿಸಿದೆವು. ಮಹಾಪ್ರಾಣ, ಅಲ್ಪಪ್ರಾಣ ಇವುಗಳೆಲ್ಲಾ ಒಂದೇ ಕೀಲಿಮನೆಯಲ್ಲಿ ಬರುವಂತೆ ನೋಡಿಕೊಳ್ಳಲಾಯ್ತು. ಆದರೆ ಸಮಸ್ಯೆಯೆಂದರೆ ಕೊಡವ, ಬ್ಯಾರಿ ಭಾಷೆಗಳನ್ನು ಕನ್ನಡದಲ್ಲಿ ಬರೆಯಬೇಕಾದರೆ ಸಮಸ್ಯೆ ಆಗುತ್ತದೆ. ಆಗ ದೇವನಾಗರಿ ಲಿಪಿಯೇ ಸೂಕ್ತ ಎಂದರು ಯೂನಿಕೋಡ್ ಸಮಸ್ಯೆ ಕನ್ನಡಕ್ಕೆ ಸಮಸ್ಯೆಯಾಗಿಯೇ ಉಳಿದಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಕೆಲವೊಂದು ಸಿಬ್ಬಂದಿ ಬಂದು ಹೋಗುತ್ತಾರೆ, ಆದರೆ ಅವರು ಏನು ಮಾಡುತ್ತಾರೋ ಎಂಬ ಜಿಜ್ಞಾಸೆ ಹುಟ್ಟುಕೊಂಡಿದೆ. ಲಿಪಿಯ ಸಮಸ್ಯೆ ಕೊನೆಗೊಂಡಿಲ್ಲ, ನನ್ನ ಉದ್ದೇಶ ಇಷ್ಟೆ ಕನ್ನಡ ಲಿಪಿಯಲ್ಲಿರುವ ಜ್ಞಾನವೆಲ್ಲಾ ಬೇರೆ ಭಾರತೀಯ ಲಿಪಿಗಳಲ್ಲಿ ಓದುವಂತಾಗಬೇಕು ಎಂದು ಹೇಳಿದರು.
ಸಮ್ಮೇಳನವನ್ನು ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಉದ್ಘಾಟಿಸಿ ಮಾತಾಡುತ್ತಾ ರಾಜ್ಯದಲ್ಲಿ ಬೇರೆ ಬೇರೆ ಕಡೆಗಳಲ್ಲಿ ಬೇರೆ ಬೇರೆ ರೀತಿಯ ಕನ್ನಡಗಳಿವೆ. ತುಳುವರಾದ ನಾವು ಕನ್ನಡವನ್ನು ಪ್ರೀತಿಸುತ್ತೇವೆ. ಭಾಷಾಭಿಮಾನ ಇರಬೇಕು, ಆದರೆ ಭಾಷೆಯ ಮೇಲೆ ಅಂಧಾಭಿಮಾನ ಸಲ್ಲದು. ಇತ್ತೀಚಿನ ಬೆಳವಣಿಗೆಯಲ್ಲಿ ಕನ್ನಡಿಗರ ಮೇಲೆ ಬೇರೆ ರಾಜ್ಯದ ಜನರು ಅಂಧಾಭಿಮಾನ ತೋರಿಸುವುದು ನಡೆಯುತ್ತಿದೆ ಎಂದು ಮಹಾರಾಷ್ಟ್ರದವರ ಗಡಿತಂಟೆಯ ಬಗ್ಗೆ ಉಲ್ಲೇಖಿಸದೆ ಮಾತಾಡಿದರು.
ಸಂಸದ ನಳಿನ್ ಕುಮಾರ್ ಕಟೀಲ್ ಪ್ರಾಸ್ತಾವಿಕವಾಗಿ ಮಾತಾಡಿದರು. ಪರಿಷತ್ನ ಅಧ್ಯಕ್ಷರಾದ ಎಸ್ ಪ್ರದೀಪ್ ಕುಮಾರ್ ಕಲ್ಕೂರ್ ಅವರು ಸಮ್ಮೇಳನದ ಆಶಯ, ಉದ್ದೇಶದ ಬಗ್ಗೆ ಮಾತಾಡಿದರು. ವೇದಿಕೆಯಲ್ಲಿ ರಾಜೇಶ್ ನಾಯಕ್ ಉಳಿಪಾಡಿಗುತ್ತು, ತಾರನಾಥ ಆಳ್ವ, ಸೇಸಪ್ಪ ಕೋಟ್ಯಾನ್, ಜಿಲ್ಲಾಧಿಕಾರಿ ಎಬಿ ಇಬ್ರಾಹಿಂ, ಡಾ. ಎ ಮಂಜಯ್ಯ ಶೆಟ್ಟಿ, ಡಿ. ಚಂದ್ರಶೇಖರ ಭಂಡಾರಿ, ಮೇಯರ್ ಮಹಾಬಲ ಮಾರ್ಲ, ಜಾನಕಿ ಬ್ರಹ್ಮಾವರ, ರೊನಾಲ್ಡ್ ಎಸ್ ಕ್ಯಾಸ್ಟಲಿನೋ ಮುಂತಾದವರು ಉಪಸ್ಥಿತರಿದ್ದರು.


