ಕೈಕಂಬ: ಪೊಳಲಿಯಲ್ಲಿ ನಡೆಯುತ್ತಿರುವ 19ನೇ ಸಾಹಿತ್ಯ ಸಮ್ಮೇಳದಲ್ಲಿ ದೇಗುಲದ ಸರ್ವಮಂಗಳ(ಶೀನಪ್ಪ ಶೇಟ್ಟಿ ಸಭಾಂಗಣ)ದಲ್ಲಿ ಪುಸ್ತಕ ಪ್ರದರ್ಶನ ಹಾಗೂ ಮಾರಾಟ ಮಳಿಗೆಯಲ್ಲಿ ಅಧಿಕವಾಗಿ ಮಕ್ಕಳೇ ಕಾಣಿಸಿಕೊಂಡಿದ್ದು ವಿಶೇಷವಾಗಿತ್ತು. ಚಿಂತಕರು ಹಾಗೂ ವಿದ್ವಾಂಸರ ಪುಸ್ತಕಕ್ಕೆ ಭಾರೀ ಬೇಡಿಕೆ ಕಂಡುಬಂದಿತು. ಎಸ್ ಎಸ್ ಭೈರಪ್ಪನವರ ಕೃತಿಗಳನ್ನು ಜನರು ಕೇಳಿ ಖೃಈದಿಸುತ್ತಿದ್ದರು. ಮಕ್ಕಳ ಪುಸ್ತಕವನ್ನು ಜನತೆ ಮುಗಿಬಿದ್ದು ಖರೀದಿಸುತ್ತಿದ್ದರು. ಸಮ್ಮೇಳನದ ಆರಂಭದಲ್ಲೇ ಅನೇಕ ಪುಸ್ತಕಗಳು ವ್ಯಾಪಾರವಾಗಿದೆ. ಮಕ್ಕಳು ಕುತೂಹಲದಿಂದ ಪುಸ್ತಕವನ್ನು ಬಿಚ್ಚಿಟ್ಟು, ಪರಿಶೀಲಿಸಿ ಮಳಿಗೆ ವ್ಯಾಪಾರಿಗಳಿಂದ ಪುಸ್ತಕದ ವೆಚ್ಚದ ಬಗ್ಗೆ ತಕರಾರು ನಡೆಸಿ ಖರೀದಿಸುವುದು, ಮಕ್ಕಳಲ್ಲಿ ಸಾಹಿತ್ಯಾಸಕ್ತಿ ಬೆಳೆಯುತ್ತಿದೆ ಎಂಬುವುದನ್ನು ತೋರಿಸಿಕೊಟ್ಟಿತು.




