ಬಂಟ್ವಾಳ: ಅಖಂಡ ಭಾರತ ಸಂಕಲ್ಪ ದಿನ ಅಂಗವಾಗಿ ಬಿಸಿರೋಡಿನಲ್ಲಿ ಹಿಂದೂ ಜಾಗರಣದ ವತಿಯಿಂದ ಬೃಹತ್ ಪಂಜಿನ ಮೆರವಣಿಗೆ ನಡೆಯಿತು. ಬಿಸಿರೋಡಿನ ಪೊಳಲಿ ಕೈಕಂಬ ದ್ವಾರದಿಂದ ಹೊರಟ ಮೆರವಣಿಗೆ ಬಿಸಿರೋಡು ಮುಖ್ಯ ಪೇಟೆಯಾಗಿ ಬ್ರಹ್ಮ ಶ್ರೀ ನಾರಾಯಣ ಗುರ ವ್ರತ್ತದ ಮೂಲಕ ತಾಲೂಕು ಕಚೇರಿ ಮುಂಬಾಗದಲ್ಲಿ ದೊಂದಿ ಮೆರವಣಿಗೆ ಸಮಾಪಣಗೊಂಡಿತು. ನೂರಾರು ಯುವಕರು ದೊಂದಿಯನ್ನು ಹಿಡಿದು ಘೊಷಣೆಯನ್ನು ಕೂಗಿ ಮೆರವಣಿಗೆಯಲ್ಲಿ ಸಾಗಿದರು.

