ಬಂಟ್ವಾಳ:ಇಲ್ಲಿಗೆ ಸಮೀಪದ ಸಂಗಬೆಟ್ಟು ಗ್ರಾಮದ ಕೆರೆ ಬಳಿ ಎಂಬಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಕಸಾಯಿಖಾನೆಗೆ ಶನಿವಾರ ಮುಂಜಾನೆ ಬಂಟ್ವಾಳ ಗ್ರಾಮಾಂತರ ಠಾಣೆಯ ಪೊಲೀಸರು ದಾಳಿ ನಡೆಸಿದ ಘಟನೆ ನಡೆದಿದೆ. ಈ ಘಟನೆಗೆ ಸಂಬಂಧಿಸಿ ಅಶ್ಪಕ್(೨೫) ಎಂಬಾತನನ್ನು ಬಂಧಿಸಲಾಗಿದೆ.
ಸ್ಥಳದಲ್ಲಿದ್ದ ಕಡಿದು ಹಾಕಿದ ಹಸುವಿನ ಮಾಂಸ ,ತ್ಯಾಜ್ಯ,ಜೀವಂತ 3 ದನ, 1 ಎಮ್ಮೆ ಹಾಗೂ ಇನ್ನಿತರ ಸೊತ್ತುಗಳನ್ನು ವಶಪಡಸಿಕೊಂಡಿದ್ದಾರೆ.ಖಚಿತ ವರ್ತಮಾನದ ಮೇರೆಗೆ ಗ್ರಾಮಾಂತರ ಠಾಣೆಯ ಎಸ್. ಐ ಉಮೇಶ್ ಕುಮಾರ್ ಈದಾಳಿ ಕಾರ್ಯಾಚರಣೆ ನಡೆಸಿದ್ದು, .ವಾಸು ನಾಯಕ ಸುರೇಶ ಜನಾರ್ದನ ,ಮೋಹನ್. ಕುಮಾರ್ ಈ ಸಂದರ್ಭದಲ್ಲಿ ಭಾಗವಹಿಸಿದ್ದರು.ಈ ಬಗ್ಗೆ ಪ್ರಕರಣ ದಾಖಲಾಗಿದ್ದು,ಮುಂದಿನ ತನಿಖ ನಡೆಯುತ್ತಿದೆ. ಕಳೆದ ಹಲವು ಸಮಯಗಳಿಂದ ಇಲ್ಲಿ ಈ ಅಕ್ರಮ ಕಸಾಯಿಖಾನೆ ನಡೆಯುತ್ತಿದೆ ಎಂದು ದೂರಲಾಗಿದೆ.

