
ಬೆಂಗಳೂರು: ಗೌರಿ ಲಂಕೇಶ್ ಹತ್ಯೆ ಕೇಸ್ನಲ್ಲಿ ಮತ್ತೊಬ್ಬ ಅರೋಪಿ ಹೆಸರನ್ನು ವಿಚಾರಣೆ ವೇಳೆ ನವೀನ್ ಕುಮಾರ್ ಬಾಯ್ಬಿಟ್ಟಿದ್ದಾನೆ ಎನ್ನುವ ಆಘಾತಿಕಾರಿ ಮಾಹಿತಿಯೊಂದು ಸಿಕ್ಕಿದೆ.
ಎಸ್ಐಟಿ ವಿಚಾರಣೆ ವೇಳೆ ಪ್ರವೀಣ್ ಹೆಸರನ್ನು ಮಹಾರಾಷ್ಟ್ರ ಮೂಲದ ನವೀನ್ ಎನ್ನುವವನ ಹೆಸರನ್ನು ಬಾಯ್ಬಿಟ್ಟಿದ್ದಾನೆ ಎನ್ನಲಾಗುತ್ತಿದ್ದು. ಇದೇ ವೇಳೆ ನವೀನ್ ಕುಮಾರ್ ಜೊತೆ ಸೇರಿ ಸಂಚು ರೂಪಿಸಿದ್ದು, ಇದೇ ವೇಳೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರವೀಣ್ ಹೆಸರು ಹೇಳಿ ಬೇರೆನೂ ಹೇಳದೆ ನವೀನ್ ಸತಾಯಿಸುತ್ತಿದ್ದಾನಂತೆ ಎನ್ನಲಾಗಿದೆ.
ಪ್ರವೀಣ್ ಪತ್ತೆ ಹಚ್ಚಲು ಎಸ್ಐಟಿ ನವೀನ್ನನ್ನು 5 ದಿನ ಕಸ್ಟಡಿಗೆ ತೆಗೆದುಕೊಂಡಿದೆ. ಆರೋಪಿಯನ್ನ ಗೋವಾ, ಕೊಡೈಕೆನಾಲ್, ಬೆಳಗಾವಿಗೆ ಕರೆದೊಯ್ದು ಮಾಹಿತಿ ಸಂಗ್ರಹಿಸಲು ಸಿದ್ಧತೆ ನಡೆಸಿದೆ.