ಬೈಲಹೊಂಗಲ:  ಆಕಸ್ಮಿಕ ಬೆಂಕಿ ತಗುಲಿ ನಾಲ್ಕು ದಾಸ್ತಾನು ಶೆಡ್ ಗಳು ಬೆಂಕಿಗಾಹುತಿಯಾದ ಘಟನೆ ಪಟ್ಟಣದ ಹಾಫೀಜಬರಿ ದಗಾ೯ ಆವರಣದಲ್ಲಿ ಶನಿವಾರ ನಡೆದಿದ್ದು, ಅಪಾರ ಹಾನಿಯಾಗಿದೆ.

ದಗಾ೯ ಆವರಣದಲ್ಲಿರುವ ಖುಲ್ಲಾ ಜಾಗೆಯಲ್ಲಿ ಶೆಡ್ಡುಗಳನ್ನು ನಿಮಾ೯ಣ ಮಾಡಿ  ವ್ಯಾಪಾರಸ್ಥರ ವ್ಯಾಪಾರ ಸಾಮಾಗ್ರಿಗಳು, ಕಚ್ಚಾ ವಸ್ತುಗಳು ಸಂಗ್ರಹ ಮಾಡುತ್ತಿದ್ದರು.

ವ್ಯಾಪಾರಸ್ಥರಾದ ಶಬ್ಬೀರ ಅಹ್ಮದ ಬಾಬುಸಾಬ ಸಂಗೊಳ್ಳಿ ಇವರಿಗೆ ಸೇರಿದ ಚುರುಮುರಿ ತಯರಿಸುವ ಭತ್ತ , ಅನ್ವರಹುಸೇನ ಖಾದಿರಸಾಬ ಪಾಟೀಲ ಅವರ ಸೋಫಾ ತಯಾರಿಸುವ ಸಾಮಗ್ರಿ, ಐನುಲ್ಲಾ ಬಾಬನ್ನವರ ಎಂಬುವವರಿಗೆ ಸೇರಿದ ಪ್ರಾಣಿಗಳ ಆಹಾರ, ಮೆಹಮೂದಾ ನದಾಫ ಇವರಿಗೆ ಸೇರಿದ ಗ್ರಿಲ್ ತಯಾರಿಸುವ ಗ್ಯಾರೇಜ್ ಗೆ ಬೆಂಕಿ ತಗುಲಿ ಅಪಾರ ಹಾನಿಯಾಗಿದೆ.

ಸುದ್ದಿ ತಿಳಿದು ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ಯಶಸ್ವಿಯಾಗಿದ್ದಾರೆ.  ಈ ಕುರಿತು ಬೈಲಹೊಂಗಲ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

By suddi9

Leave a Reply

Your email address will not be published. Required fields are marked *