ಕೈಕಂಬ: ಸ್ಕಂದಶ್ರೀ ಸೇವಾ ಸಮಿತಿ ವತಿಯಿಂದ 16ನೇ ವರ್ಷದ ಸಾರ್ವಜನಿಕ ಶ್ರೀ ಸತ್ಯ ನಾರಾಯಣ ಪೂಜೆ ಹಾಗೂ ಎಸೆಸೆಲ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿನಿಗೆ ಸನ್ಮಾನ ಕಾರ್ಯಕ್ರಮ ಇಲ್ಲಿನ ಕಂದಾವರದಲ್ಲಿ ಇತ್ತೀಚೆಗೆ ನೆರವೇರಿತು.
ಈ ವೇಳೆ 2017-18 ನೇ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ ಅಧಿಕ ಅಂಕಗಳಿಸಿದ ವಿದ್ಯಾರ್ಥಿನಿ ಭವ್ಯಶ್ರೀ ಅವರನ್ನು ಸಮಿತಿಯ ವತಿಯಿಂದ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಉದ್ಯಮಿಗಳಾದ ರವೀಂದ್ರ ಕೈಕಂಬ, ಗಣೇಶ್ ಶೆಟ್ಟಿಗಾರ್, ಜಯರಾಂ ಕೋಟ್ಯಾನ್, ಭೋಜ ಶೆಟ್ಟಿಗಾರ್, ಸಮಿತಿಯ ಅಧ್ಯಕ್ಷ ನವೀನ್ ಸ್ಕಂದನಗರ, ಶೇಖರ್ ಶೆಟ್ಟಿಗಾರ್, ಹಾಸ್ಯ ಕಲಾವಿದ ಬಾಚು ಅದ್ಯಪಾಡಿ, ಭರತ್ ಎಸ್.ಕರ್ಕೇರ ಮತ್ತಿತರರು ಉಪಸ್ಥಿತರಿದ್ದರು.
ಬಳಿಕ ಇಂಚರ ಮ್ಯೂಸಿಕಲ್ ಗ್ರೂಪ್ ಕೈಕಂಬ ತಂಡದಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಿತು.
