ಅಮ್ಮುಂಜೆ: ವೀರ ಯೋಧ ಯಾದವ ಫ್ರಂಡ್ಸ್ ಹಾಗೂ ಮಹಿಳಾ ಘಟಕ ವತಿಯಿಂದ ವಿದ್ಯಾರ್ಥಿಗಳ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸುವ ಪ್ರದಾನ ಕಾರ್ಯಕ್ರಮ ಸಂಘದ ಕಟ್ಟಡದಲ್ಲಿ ಇತ್ತೀಚೆಗೆ ನಡೆಯಿತು.
ಈ ವೇಳೆ ಅಮ್ಮುಂಜೆ ಪರಿಸರದ ಸುಮಾರು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿಶೇಷ ಪ್ರೋತ್ಸಾಹ ಧನ, 150 ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಹಾಗೂ 5 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ದೇವುದಾಸ್ ಹೆಗ್ಡೆ ಅಮ್ಮುಂಜೆಗುತ್ತು, ಗ್ಲೇಡಿ ಆಲ್ವರೆಸ್, ರೋಶೀನ್ ಆಲ್ವರೆಸ್ ವಾಮಂಜೂರು, ವಿನೋದ್ ನಾಯ್ಕ್, ವಾಮನ ಆಚಾರ್ಯ, ಲತಾ ಎನ್ ರಾವ್, ಚೇತನಾ ರಾವ್, ವಿಜಯಲಕ್ಷ್ಮೀ.ಪಿ ಬಳ್ಲಾಲ್, ಜನಾರ್ದನ ಬಾರಿಂಜೆ, ಸತ್ಯಪ್ರಸಾದ್ ಶೆಟ್ಟಿ, ಪ್ರಶಾಂತ್ ಕುಲಾಲ್ ಮತ್ತಿತರರು ಉಪಸ್ಥಿತರಿದ್ದರು.





