05

ಪೊಳಲಿ: ಎಡೆಬಿಡದೆ ಸುರಿಯುತ್ತಿರುವ ಭಾರೀ ಮಳೆಗೆ ಬೃಹತ್ ಆಕಾರದ ಮರವೊಂದು ಧರೆಗುಳಿದ ಪರಿಣಾಮ ವಿದ್ಯುತ್ ಕಂಬ ಸಂಪೂರ್ಣ ಹಾನಿಗೊಂಡ ಘಟನೆ ಇಲ್ಲಿನ ಸಮೀಪದ ಕಲ್ಲಗುಡ್ಡೆ ಗ್ರಾಮದ ಡೋಮಿನಿಕ್ ಶಾಲೆ ಎದುರು ಗುರುವಾರ ರಾತ್ರಿ ನಡೆದಿದೆ.

ಕಲ್ಲಗುಡ್ಡೆ ರಸ್ತೆ ಬದಿಯಲ್ಲಿದ್ದ ಈ ಮರ ಭಾರೀ ಮಳೆಗೆ ಉರುಳಿ ಬಿದ್ದಿದ್ದು, ಇದರಿಂದ ಸ್ಥಳದಲ್ಲಿದ್ದ ವಿದ್ಯುತ್ ಕಂಬ ಮುರಿದು ಬಿದ್ದಿದೆ. ಸ್ಥಳೀಯ ನಿವಾಸಿಗಳು ಬಿದ್ದಿದ್ದ ಮರವನ್ನು ತೆರೆವುಗೊಳಿಸಲು ಮುಂದಾದರು. ಆದರೆ ಭಾರೀ ಗಾತ್ರದ ಮರವಾಗಿದ್ದರಿಂದ ತೆರವುಗೊಳಿಸಲು ಸಾಧ್ಯವಾಗಿಲ್ಲ.

ಘಟನೆಯಿಂದ ವಿದ್ಯುತ್ ಕಡಿತಗೊಂಡಿದ್ದು, ಸ್ಥಳಕ್ಕೆ ಭೇಟಿ ನೀಡಿದ ಏಇ ಚಿದಾನಂದ ಹಾಗೂ ಲೈನ್‍ಮ್ಯಾನ್‍ಗಳಾದ ಕುಮಾರ್ ಮತ್ತು ಮಲ್ಲಣ್ಣ ಅವರು ರಾತ್ರಿ ಆದ್ದರಿಂದ ಮರವನ್ನು ತೆರೆವುಗೊಳಿಸಲಾಗದೆ, ಸ್ಥಳೀಯ ನಿವಾಸಿಗಳಿಗೆ ತಾತ್ಕಾಲಿಕ ವಿದ್ಯುತ್ ವ್ಯವಸ್ಥೆ ಕಲ್ಪಿಸಿದ್ದಾರೆ. ಇನ್ನೂ ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದರಿಂದ ವಾಹನ ಸವಾರರು ಪರದಾಡಬೇಕಾಯಿತು.

ಇಂದು ಬೆಳಗ್ಗೆ ಸ್ಥಳಕ್ಕಾಗಮಿಸಿದ ಮೆಸ್ಕಾಂ ಅಧಿಕಾರಿಗಳು, ಪಿಡಬ್ಲ್ಯು ಇಂಜಿನಿಯರ್ ಅರುಣ್ ಪ್ರಕಾಶ್ ಅವರು ಸಿಬ್ಬಂದಿ ಹಾಗೂ ಸ್ಥಳೀಯರ ಸಹಕಾರದಿಂದ ಕ್ರೇನ್ ಮೂಲಕ ಕಾರ್ಯಾಚರಣೆ ನಡೆಸಿ ಮರ ಮೇಲೆಕ್ಕೆತ್ತುವ ಮೂಲಕ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಅರಣ್ಯ ಇಲಾಖೆ ನಿರ್ಲಕ್ಷ್ಯ: ರಸ್ತೆ ಬದಿಯಲ್ಲಿ ಅಪಾಯಕಾರಿ ರೀತಿಯಲ್ಲಿ ಕಂಡು ಬರುವ ಮರಗಳನ್ನು ಅರಣ್ಯ ಇಲಾಖೆ ತೆರೆವುಗೊಳಿಸಲು ಮುಂದಾಗದಿದ್ದುದರಿಂದ ಇಂತಹ ಅನಾಹುತ ನಡೆಯುತ್ತಿದೆ. ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಾ ಜನರ ಜೀವದ ಜತೆ ಚೆಲ್ಲಾಟವಾಡುತ್ತಿದ್ದು, ಇದಕ್ಕೆ ಕೊನೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

 04

02

8vpba6

 

 

By suddi9

Leave a Reply

Your email address will not be published. Required fields are marked *