ಪೊಳಲಿ: ನೂತನ ಧ್ವಜಸ್ತಂಭ ನಿರ್ಮಾಣ ಸಮಿತಿಯಿಂದ ಜೂ.18ರಂದು ಬೆಳಗ್ಗೆ 10ರಿಂದ ಇಲ್ಲಿನ ರಾಜರಾಜೇಶ್ವರಿ ದೇವಸ್ಥಾನದಲ್ಲಿ “ನೂತನ ಧ್ವಜಸ್ತಂಭ ಮರದ ತೈಲಾದಿವಾಸ ಕಾರ್ಯಕ್ರಮ” ಆಯೋಜಿಸಲಾಗಿದೆ.
ಅಂದು ನೂತನ ಧ್ವಜಸ್ತಂಭಕ್ಕೆ ಶುದ್ಧ ಎಳ್ಳೆಣ್ಣೆ ಉಪಯೋಗಿಸಬೇಕಾಗಿದ್ದು, ಆದ್ದರಿಂದ ಇದರ ಶುದ್ಧತೆ ಕಾಪಾಡುವ ಸಲುವಾಗಿ ದೇವಳದ ವತಿಯಿಂದ ಎಳ್ಳಣ್ಣೆಯನ್ನು ಭಕ್ತರಿಗೆ ನೀಡಲಾಗುವುದು. ಎಳ್ಳೆಣ್ಣೆಗಾಗಿ ಭಕ್ತಾಧಿಗಳು ದೇವಳದ ಜೀರ್ಣೋದ್ಧಾರ ಕಚೇರಿಯಿಂದ ರಶೀದಿ ಪಡೆಯಬೇಕು ಎಂದು ಪ್ರಕಟನೆ ತಿಳಿಸಿದೆ.
