ಮೂಡುಬಿದಿರೆ: ಜೆಸಿಐ ಮೂಡುಬಿದಿರೆ ತ್ರಿಭುವನ್, ರೋಟರಿ ಮಿಡ್‍ಟೌನ್ ಮೂಡುಬಿದಿರೆ ಹಾಗೂ ಶ್ರೀ ಮಹಾವೀರ ಕಾಲೇಜಿನ ಹಳೆವಿದ್ಯಾರ್ಥಿ ಸಂಘದ ಆಶ್ರಯದಲ್ಲಿ ಶ್ರೀ ಮಹಾವೀರ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ‘ಎಂಪವರಿಂಗ್ ಯೂತ್’ ಎಂಬ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತು.

mahaveera college
ರೋಟರಿ ಮಿಡ್‍ಟೌನ್ ಅಧ್ಯಕ್ಷ ಪ್ರವೀಣ್ ಕಾರ್ಯಕ್ರಮ ಉದ್ಘಾಟಿಸಿದರು.
ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಸುರೇಶ್ ಶೆಟ್ಟಿ, ಜೀವನದ ಪ್ರತೀಕ್ಷಣವೂ ಅತ್ಯಮೂಲ್ಯವಾಗಿದ್ದು, ಈ ಸಮಯದಲ್ಲಿ ನಾವು ಕಲಿಯುವಂತದ್ದು ಬಹಳಷ್ಟಿದೆ. ಉತ್ತಮ ಅವಕಾಶ ದೊರೆತಾಗ ಹಿಂಜರಿಯದೆ, ಸದುಪಯೋಗಪಡಿಸಿಕೊಳ್ಳಿ ಎಂದರು.
ಸಂಘದ ಕಾರ್ಯದರ್ಶಿ, ಮಹಾವೀರ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಪೆÇ್ರ.ರಮೇಶ್ ಭಟ್ ವಂದಿಸಿದರು. ಜೆಸಿಐ ಅಧ್ಯಕ್ಷೆ ಸಂಗೀತಾ ಪ್ರಭು ಉಪಸ್ಥಿತರಿದ್ದರು. ಸಂತೋಷ್ ಶೆಟ್ಟಿ, ನಾಗರಾಜ್, ವಿನಯಚಂದ್ರ ಸಂಪನ್ಮೂಲ ವ್ಯಕ್ತಿಗಳಾಗಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.

By suddi9

Leave a Reply

Your email address will not be published. Required fields are marked *