ಮೂಡುಬಿದಿರೆ: ಇಲ್ಲಿನ ಪೇಟೆಯಲ್ಲಿರುವ ಶ್ರೀ ಹನುಮಂತ ದೇವಸ್ಥಾನಕ್ಕೆ ಮಾಜಿ ಮುಖ್ಯಮಂತ್ರಿ ಡಾ.ಎಂ ವೀರಪ್ಪ ಮೊಯ್ಲಿ-ಮಾಲತಿ ವಿ.ಮೊಯ್ಲಿ ದಂಪತಿ ಬೆಳ್ಳಿಯ ಗದೆಯನ್ನು ಭಾನುವಾರ ಸಮರ್ಪಿಸಿದರು.

ಮಾಜಿ ಸಚಿವ ಕೆ.ಅಭಯಚಂದ್ರ ಜೈನ್, ಮೂಡುವೇಣುಪುರ ಶ್ರೀ ವೆಂಕಟರಮಣ ಹಾಗೂ ಹನುಮಂತ ದೇವಸ್ಥಾನದ ಆಡಳಿತ ಮೊಕ್ತೇಸರ ಜಿ. ಉಮೇಶ್ ಪೈ, ಮೊಕ್ತೇಸರಾದ ರಾಮನಾಥ ಭಟ್, ರಘುವೀರ್ ಶೆಣೈ, ರಾಜೇಶ್ ಮಲ್ಯ, ಪುರಸಭಾ ಸದಸ್ಯ ರತ್ನಾಕರ ದೇವಾಡಿಗ, ಮೂಡುಬಿದಿರೆ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ರತ್ನಾಕರ ಸಿ. ಮೊಯ್ಲಿ, ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಚಂದ್ರಹಾಸ ಸನಿಲ್, ಕೃಷ್ಣಮೂರ್ತಿ
ದೇವಸ್ಥಾನದ ಪ್ರಧಾನ ಅರ್ಚಕ ಹರೀಶ್ ಭಟ್ ಪೂಜಾವಿಧಿ ನೆರವೇರಿಸಿದರು. ದೇವಸ್ಥಾನದ ಆಡಳಿತ ಮಂಡಳಿ ವತಿಯಿಂದ ವೀರಪ್ಪ ಮೊಯ್ಲಿ ದಂಪತಿಯನ್ನು ಗೌರವಿಸಲಾಯಿತು.
ಶ್ರೀರಾಮ ಮಂದಿರಕ್ಕೆ ಭೇಟಿ:
ಗೌರಿಕೆರೆ ಬಳಿಯಿರುವ ಶ್ರೀರಾಮಮಂದಿರಕ್ಕೆ ವೀರಪ್ಪ ಮೊಯ್ಲಿ ದಂಪತಿ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಮೂಡುಬಿದಿರೆ ದೇವಾಡಿಗ ಸಂಘದ ಅಧ್ಯಕ್ಷ ಶಶಿಧರ ದೇವಾಡಿಗ, ಮಹಿಳಾ ಸಮಿತಿ ಅಧ್ಯಕ್ಷ ಭಾರತಿ ರತ್ನಾಕರ ದೇವಾಡಿಗ, ಯುವ ವೇದಿಕೆ ಅಧ್ಯಕ್ಷ ಸುಮಂತ್ ದೇವಾಡಿಗ, ಪುರಂದರ ದೇವಾಡಿಗ ಸಹಿತ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.