ಮೂಡುಬಿದಿರೆ: ಶುಕ್ರವಾರ ಸುರಿದ ಭಾರೀ ಗಾಳಿ ಮಳೆಗೆ ಮರಬಿದ್ದು ಮನೆಗೆ ಹಾನಿಯಾದ ಘಟನೆ ಪಾಲಡ್ಕ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೇಮಾರು ಸಮೀಪದ ಕಜೆ ಎಂಬಲ್ಲಿ ನಡೆದಿದೆ.
ಕಜೆ ನಿವಾಸಿ ಲಾರೆನ್ಸ್ ಪಿಂಟೋ-ಎಲಿಜಾ ಪಿಂಟೊ ವೃದ್ಧ ದಂಪತಿಯ ಮನೆ ಮೇಲೆ ಮರ ಬಿದ್ದು ಇದರಿಂದಾಗಿ ಮನೆಯ ಮೇಲ್ಛಾವಣಿ ಕುಸಿದಿದೆ.

??????????????????????????????? ಈ ಸಂದರ್ಭದಲ್ಲಿ ದಂಪತಿಗಳು ಉಡುಪಿಯಲ್ಲಿ ಸಂಬಂಧಿಕರ ಮನೆಗೆ ತೆರಳಿದ್ದು, ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ. ಎರಡುಕೋಣೆಗಳಿರುವ ಮಣ್ಣಿನ ಗೋಡೆಯಿರುವ ಮನೆ ಶಿಥಿಲಾವಸ್ಥೆಯಲ್ಲಿದ್ದು, ಗಾಳಿ ಮಳೆಯಿಂದ ಕುಸಿಯುವ ಭೀತಿ ದಂಪತಿಗೆ ಎದುರಾಗಿದೆ. ತಿಂಗಳ ಹಿಂದೆಯಷ್ಟೇ ಹೆಬ್ಬಾಲಸಿನ ಮರಕ್ಕೆ ಸಿಡಿಲು ಬಡಿದು ಮರ ಸುಟ್ಟು ಹೋಗಿತ್ತು. ಮನೆಯ ಪಕ್ಕದ ತೋಟದಲ್ಲಿರುವ ಕಂಗಿನ ಮರಗಳು ಧರೆಗುರುಳಿದೆ. ???????????????????????????????

mbd_july14_1 (3)
ಗ್ರಾಮಕರಣಿಕ ಶ್ರೀನಿವಾಸ್, ಗ್ರಾಮಸಹಾಯಕ ಫ್ರಾನ್ಸಿಸ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

By suddi9

Leave a Reply

Your email address will not be published. Required fields are marked *