ಬಂಟ್ವಾಳ: ದ.ಕ.ಜಿಲ್ಲಾ ಮಡಿವಾಳರ ಸಂಘ ಮಂಗಳೂರು ಮತ್ತು ಬಂಟ್ವಾಳ ತಾಲೂಕು ಮಡಿವಾಳರ ಸಮಾಜ ಸೇವಾ ಸಂಘ ಹಾಗೂ ಮಡಿವಾಳ ಯುವ ಬಳಗ ಬಂಟ್ವಾಳ ಇದರ ಸಂಯುಕ್ತ ಆಶ್ರಯದಲ್ಲಿ ಆಟಿದ ಆಯನೊ-2018 (ತುಳುವೆರೆನ ಬೆನ್ನಿ ಸಂಸ್ಕøತಿದ ನೆಂಪು ಬೊಕ್ಕ ಕೆಸರ್ದ ಕಂಡೊಡು ಕುಸಲ್ದ ಗೊಬ್ಬುಲೆನ ಲೇಸ್) ಕಾರ್ಯಕ್ರಮವು ಜು.29ರಂದು ಬಂಟ್ವಾಳ ತಾಲೂಕಿನ ಪಂಜಿಕಲ್ಲು ಶ್ರೀ ಬ್ರಹ್ಮಬೈದರ್ಕಳ ಗರಡಿಯ ವಠಾರದಲ್ಲಿ ಜರಗಲಿದೆ.

ಉದ್ಘಾಟನಾ ಸಮಾರಂಭದಲ್ಲಿ ಕರಿಂಜೆ ಶ್ರೀ ಮುಕ್ತಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ದ.ಕ.ಜಿಲ್ಲಾ ಮಡಿವಾಳರ ಸಂಘದ ಅಧ್ಯಕ್ಷ ಬಿ.ಎನ್. ಪ್ರಕಾಶ್ ಅಧ್ಯಕ್ಷತೆ ವಹಿಸಲಿದ್ದಾರೆ. ಆಟಿದ ಆಯನೊ ಆಚರಣಾ ಸಮಿತಿ ಅಧ್ಯಕ್ಷ ಪುಷ್ಪರಾಜ್ ಕುಕ್ಕಾಜೆ ಆಯನೊದ ಮದಿಪು ನೀಡಲಿರುವರು. ಪಂಜಿಕಲ್ಲು ಶ್ರೀ ಬ್ರಹ್ಮಬೈದರ್ಕಳ ಗರಡಿಯ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪ್ರಕಾಶ್ ಜೈನ್ ಕ್ರೀಡೆಗಳಿಗೆ ಚಾಲನೆ ನೀಡಲಿರುವರು. ಕರ್ನಾಟಕ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯೆ ಶ್ಯಾಮಲ ಕುಂದರ್, ಉದ್ಯಮಿಗಳಾದ ಕೃಷ್ಣ ಕಲ್ಲೋಡಿ, ದೇವೇಂದ್ರ ಬುನ್ನನ್,ಜಿನೇಂದ್ರ ಮಾಣಿ, ಸುಧಾಕರ ಪುತ್ರನ್ , ಸದಾನಂದ ಸಾಲಿಯಾನ್,ಹರೀಶ್ ಸಾಲಿಯಾನ್, ದೀಪಕ್ ವಿಠಲ್ ಮಡಿವಾಳ, ಮತ್ತಿತರರು ಭಾಗವಹಿಸಲಿರುವರು. ಇದೇ ಸಂದರ್ಭದಲ್ಲಿ ಕಲಾವಿದ ಬಾಲಕೃಷ್ಣ ಮಂಜೇಶ್ವರ, ಪ್ರಗತಿಪರ ಕೃಷಿಕ ಧರ್ಮಣ ಕುಂದರ್ ಕಿದೆಬೆಟ್ಟು, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಕಂಬಳ ಓಟಗಾರ ಜಯಕರ ಮಡಿವಾಳ ಇವರಿಗೆ ಸನ್ಮಾನ ನಡೆಯಲಿದೆ.

By suddi9

Leave a Reply

Your email address will not be published. Required fields are marked *