ಬಂಟ್ವಾಳ : ಫರಂಗಿಪೇಟೆಯಲ್ಲಿ ” ಮೌಲಾನಾ ಆಜಾದ್ ಮಾದರಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ” ಯ ಉದ್ಘಾಟನಾ ಸಮಾರಂಭ ಕಾರ್ಯಕ್ರಮವು ಟುಡೇ ಫೌಂಡೇಶನ್ ಫರಂಗಿಪೇಟೆ ಇವರ ವತಿಯಿಂದ ಜುಲೈ 21 ಶನಿವಾರ ಬೆಳಗ್ಗೆ ಫರಂಗಿಪೇಟೆಯ ಪುದು ಶಾಲೆಯಲ್ಲಿ ನಡೆಯಲಿದೆ.

” ನುಡಿದಂತೆ ನಡೆದ ” ಕರ್ನಾಟಕ ರಾಜ್ಯ ಸರಕಾರದ ನೂತನ ನಗರಾಭಿವೃದ್ಧಿ ಹಾಗೂ ವಸತಿ ಸಚಿವರಾದ ಸನ್ಮಾನ್ಯ ಶ್ರೀ ಯು.ಟಿ ಖಾದರ್ ರವರು ನೂತನ ಆಂಗ್ಲ ಶಾಲೆಯೊಂದು ನಿರ್ಮಾಣವಾಗುವಂತೆ ಮಂಜೂರು ಮಾಡಿದ್ದು, ಇದರ ಉದ್ಘಾಟನಾ ಸಮಾರಂಭ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಸರಕಾರದ ನೂತನ ಹಜ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ಆಹಾರ ಮತ್ತು ನಾಗರಿಕರ ಸರಬರಾಜು ಪೂರೈಕೆ ಸಚಿವರಾದ ಸನ್ಮಾನ್ಯ ಶ್ರೀ ಜಮೀರ್ ಅಹಮ್ಮದ್ ಖಾನ್ ರವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿರುವರು. ಅಲ್ಲದೇ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಉಮರ್ ಫಾರೂಕ್ ಫರಂಗಿಪೇಟೆ ರವರ ಪ್ರಯತ್ನದಿಂದಾಗಿ ಪುದು ಮಾಪ್ಲ ಶಾಲೆಯಲ್ಲಿ “ಉಚಿತ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ” ಪ್ರಾರಂಭವಾಗಲಿದೆ.