ಕೈಕಂಬ: 100 ವರ್ಷಗಳ ಇತಿಹಾಸವಿರುವ ಈ ಸಮಾಜಸೇವಾ ಸಂಸ್ಥೆ ಸಮಾಜಕ್ಕೆ ಗಣನೀಯ ಸೇವೆ ಸಲ್ಲಿಸುತ್ತ ಬಂದಿದೆ. ಕ್ಲಬ್ಬಿನ ಸದಸ್ಯರಾಗಬೇಕಿದ್ದರೆ ಆರ್ಥಿಕವಾಗಿ ಸದೃಢತೆಯಂತಹ ಸೂಕ್ತ ಅರ್ಹತೆ ಇರಬೇಕಾಗುತ್ತದೆ. ಕ್ಲಬ್ಬಿನಿಂದ ಯಾರಿಗೂ ಹಣಕಾಸಿನ ಲಾಭವಿಲ್ಲ. ಸೇವಾ ಕಾರ್ಯಗಳಿಗಾಗಿ ಸದಸ್ಯರು ತಮ್ಮ ಸಂಬಳದಲ್ಲಿ ಒಂದಂಶ ಕ್ಲಬ್ಬಿಗೆ ಮೀಸಲಿಡಬೇಕಾಗುತ್ತದೆ. ಅಂದರೆ ಇದು ವೈಯಕ್ತಿಕ ಗೌರವಾನ್ವಿತ ಸಂಸ್ಥೆಯಾಗಿದೆ ಎಂದು ಲಯನ್ಸ್ ಜಿಲ್ಲಾ2ನೇ ಉಪಗವರ್ನರ್. ಡಾ. ಗೀತ್‍ಪ್ರಕಾಶ್ ಹೇಳಿದರು.20vplions

ಅವರು ಗುರುಪುರ-ಕೈಕಂಬ ಲಯನ್ಸ್ ಕ್ಲಬ್‍ನ 2018-19ರ ಸಾಲಿನ ನೂತನ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ನೂತನ ಲಯನ್ ಡಾ. ಗೀತಪ್ರಕಾಶ್(ಎಂಜೆಎಫ್) ಅಧ್ಯಕ್ಷತೆಯಲ್ಲಿಗುರುಪುರ ಕೈಕಂಬದ ಪೊಂಪೈ ಸ್ಕ್ಯಾರ್ನ ಗ್ರಾಂಡ್ ಗ್ಯಾಲೆಕ್ಸಿಯಲ್ಲಿ ನಡೆಯಿತು

20vp lions8

20vp lions2

ಲ. ಜೇಮ್ಸ್ ಮೇಂಡ ಅಧ್ಯಕ್ಷರಾಗಿ, ಲ. ಮೆಲ್ವಿನ್ ಸಾಲ್ಡಾನ ಕಾರ್ಯದರ್ಶಿಯಾಗಿ ಹಾಗೂ ಲ. ಡಾ. ಇ. ಕೆ. ಎ. ಸಿದ್ಧಿಕ್ ಖಜಾಂಚಿಯಾಗಿ ಅಧಿಕಾರದ ಪ್ರಮಾಣವಚನ ಸ್ವೀಕರಿಸಿದರು. ವೇದಿಕೆಯಲ್ಲಿ ಹಿಂದಿನ ಸಾಲಿನ ಅಧ್ಯಕ್ಷ ಲ. ಜೆಪ್ರಿಯನ್ ತೌರೋ, ಕಾರ್ಯದರ್ಶಿ ಲ. ಸಂದೀಪ್ ಇದ್ದರು.20-01

20vp lions42003ರಲ್ಲಿ ಆರಂಭಗೊಂಡಿರುವ ಗುರುಪುರ-ಕೈಕಂಬ ಲಯನ್ಸ್ ಕ್ಲಬ್ ಗೆ ಈ ಬಾರಿ 10 ಹೊಸಬರು ಸೇರ್ಪಡೆಯಾಗಿದ್ದು, ಪ್ರಸಕ್ತ ಕ್ಲಬ್ ಬಲ 25 ಆಗಿದೆ.
ಇದೇ ಸಂದರ್ಭದಲ್ಲಿ ಲ.ಡಾ. ಗೀತ್ ಪ್ರಕಾಶ್ ಹಾಗೂ ಗಾಯತ್ರಿ ಗೀತ್ ಪ್ರಕಾಶ್ ಅವರನ್ನು ಸನ್ಮಾನಿಸಲಾಯಿತು. ಲ. ಜೇಮ್ಸ್ ಮೇಂಡ ಸ್ವಾಗತಿಸಿ,ಲ. ಮೆಲ್ವಿನ್ ಸಾಲ್ಡಾನವಂದಿಸಿ ಲ.ಮಹೇಶ್ ಶೆಟ್ಟಿ ನಿರೂಪಿಸಿದರು.20vp lions1

 

By suddi9

Leave a Reply

Your email address will not be published. Required fields are marked *