ಬಂಟ್ವಾಳ: ಮೂರು ವರ್ಷದ ಪುಟ್ಟ ಮಗು ರಕ್ತ ಕ್ಯಾನ್ಸರ್ ನಿಂದ ಬಳಲುತ್ತಿದ್ದು, ಔಷಧೋಪಚಾರಕ್ಕಾಗಿ ಬಡ ಪುಟ್ಟ ಸಂಸಾರ ಆರ್ಥಿಕ ಸಹಾಯದ ನಿರೀಕ್ಷೆಯಲ್ಲಿದೆ.
ಬಂಟ್ವಾಳ ತಾಲೂಕಿನ ಮಣಿನಾಲ್ಕೂರು ಗ್ರಾಮದ ಅಜಿಲಮೊಗರು ಸೇವುದಕೊಡಿಯ ಪುಷ್ಪರಾಜ್ ಪೂರ್ಣಿಮಾ ದಂಪತಿಯ 2 ಗಂಡು ಮಕ್ಕಳಲ್ಲಿ ಕಿರಿಯವನಾದ 3 ವರ್ಷದ ಪ್ರನ್ವಿತ್ ರಕ್ತ ಕ್ಯಾನ್ಸರ್ ನಿಂದ ಬಳಲುತ್ತಿರುವ ಮಗು. ಈ ಮೂರು ವರ್ಷದ ಮುಗುವಿನ ಔಷಧ ಹಾಗೂ ಆಸ್ಪತ್ರೆಯ ಖರ್ಚಿಗಾಗಿ ಸರಿಯಾದ ಆರ್ಥಿಕ ವ್ಯವಸ್ಥೆ ಇಲ್ಲದೆ, ಆರ್ಥಿಕ ಸಹಾಯ ಬೇಕಾಗಿದೆ.

blood cancer- child (1)

ಈ ದಂಪತಿಯ 6 ವರ್ಷದ ಮೊದಲ ಗಂಡು ಮಗು ಮನ್ವಿತ್ ಒಂದನೇ ತರಗತಿಯಲ್ಲಿ ಕಲಿಯುತ್ತಿದ್ದು, ಪ್ರನ್ವಿತ್‍ಗೆ ಅನಾರೋಗ್ಯದ ಕಾರಣ ಚಿಕಿತ್ಸೆ ಗೆಂದು ಆಸ್ಪತ್ರೆಗೆ ಹೋದಾಗ ಈ ಪುಟ್ಟ ಕಂದನಿಗೆ ರಕ್ತದ ಕ್ಯಾನ್ಸರ್ ಮೊದಲ ಹಂತದಲ್ಲಿರುವುದು ಪತ್ತೆಯಾಗಿದೆ. ಮನೆಯವರ ಮುದ್ದುಮಗನಾದ ಪ್ರನ್ವಿತ್ ಮನೆ ತುಂಬಾ ಓಡಾಡಿ ಕೊಂಡು ಆಡಬೇಕಿದ್ದ ಕಂದನಿಗೆ ಬಂದಿರುವ ಕಾಯಿಲೆಯಿಂದ ಮನೆ ಮಂದಿಯೆಲ್ಲ ಚಿಂತೆಗೀಡಾಗಿದ್ದಾರೆ. ಈ ಬಡ ಕುಟುಂಬಕ್ಕೀಗ ಮಗನ ಕ್ಯಾನ್ಸರ್‍ನಿಂದಾಗಿ ದಿಕ್ಕೇ ತೋಚದಂತಾಗಿದೆ. ಜೀವನೋಪಾಕ್ಕಾಗಿ ಸೆಂಟ್ರಿಂಗ್ ಕೆಲಸ ಮಾಡುತ್ತಿರುವ ಪುಷ್ಪರಾಜ್‍ರಿಗೆ ಮಗುವಿನ ಚಿಕಿತ್ಸೆಗೆ ಹಣ ಹೊಂದಿಸುವುದರ ಜೊತೆಗೆ ಮನೆಯಲ್ಲಿರುವ 6 ಸದಸ್ಯರ ದೈನಂದಿನ ಖರ್ಚನ್ನು ಭರಿಸುವುದು ಅಸಾಧ್ಯವಾಗಿದೆ. ಇದೀಗ ಪುಟ್ಟ ಕಂದಮ್ಮ ಕಂಕನಾಡಿಯ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಕೆಲಸದ ನಡುವೆಯೂ ಆಸ್ಪತ್ರೆಗೂ ಅಲೆದಾಡಬೇಕಾದ ಪರಿಸ್ಥಿತಿ ಉಂಟಾಗಿದೆ. ಖರ್ಚು ಮಾಡಿ ಚಿಕಿತ್ಸೆ ಕೊಡಿಸಲು ದಯನೀಯ ಪರಿಸ್ಥಿತಿ ಉಂಟಾಗಿದೆ.

blood cancer- child (2)
ದಾನಿಗಳು ಈ ಪುಟ್ಟ ಮಗುವಿನ ಹಾಗೂ ಮನೆಯವರ ಪರಿಸ್ಥಿಯನ್ನು ನೊಡಿ ತಮ್ಮ ಕೈಲಾದಷ್ಟು ಸಹಾಯ ಮಾಡಿದಲ್ಲಿ ಈ ಪುಟ್ಟ ಮಗು ಎಲ್ಲಾ ಮಕ್ಕಳಂತೆ ಆರೋಗ್ಯಕರವಾದ ಜೀವನ ಮಾಡಬಹುದು ಎಂಬ ಆಶಾವಾದದಲ್ಲಿ ಹೆತ್ತವರಿದ್ದಾರೆ.
ಪುಷ್ಪರಾಜ್: 9743332241. ಬ್ಯಾಂಕ್ ಖಾತೆ ವಿವರ: ಪೂರ್ಣಿಮಾ, ಸಂಖ್ಯೆ 13001231000746, ವಿಜಯಾ ಬ್ಯಾಂಕ್, ಅಲ್ಲಿಪಾದೆ ಶಾಖೆ, ಎಎಫ್‍ಎಸ್‍ಸಿ ಕೊಡ್: ವಿಐಜೆಬಿ0001310

By suddi9

Leave a Reply

Your email address will not be published. Required fields are marked *